ಬೆಂಗಳೂರು : ನಿನ್ನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರೌಡಿಶೀಟರ್ ಗಳ ಜೊತೆ ಕುಳಿತುತಿಕೊಂಡು ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿತ್ತು. ಅದಾದ ಕೆಲವು ಸಮಯದ ಬಳಿಕ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ವಿಡಿಯೋ ಸಹ ವೈರಲ್ ಆಗಿತ್ತು. ಇದೀಗ ಇಂದು ಮತ್ತೊಂದು ಫೋಟೋ ವೈರಲ್ ಆಗಿದ್ದು ದರ್ಶನ್ ಬೆಡ್ ಮೇಲೆ ಕುಳಿತುಕೊಂಡು ಸಿಗರೇಟ್ ಸೇದುತ್ತಿರುವ ಫೋಟೋ ಕೂಡ ವೈರಲಾಗಿದೆ.
ಹೌದು ನಿನ್ನೆ ರೌಡಿಗಳ ಜೊತೆಗೆ ಫೋಟೋ ವೈರಲ್ ಆಗಿದ್ದು, ಇಂದು ಬೆಡ್ ಫೋಟೋ ವೈರಲ್ ಆಗಿದೆ. ಸಿಗರೇಟ್ ಹಿಡಿದು ಬೆಡ್ ಮೇಲೆ ಕುಳಿತಿರುವ ದರ್ಶನ್ ಫೋಟೋ ಇದೀಗ ವೈರಲ್ ಆಗಿದೆ. ಹೌದು ನಿನ್ನೆ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ದರ್ಶನವರ ಮ್ಯಾನೇಜರ್ ಆದಂತಹ ನಾಗರಾಜ್ ಹಾಗು ಇನ್ನೊಬ್ಬ ರೌಡಿಶೀಟರ್ ಆದ ಕುಳ್ಳಸೀನ ಜೊತೆಗೆ ಕುಳಿತುಕೊಂಡು ಕಾಫಿ ಕುಡಿಯುತ್ತ ಸಿಗರೇಟ್ ಸೇದುತ್ತಾ ಕುಳಿತಿದ್ದ ಫೋಟೋ ವೈರಲ್ ಆಗಿತ್ತು.
ಇದೀಗ ಇಂದು ಕೂಡ ನಟ ದರ್ಶನ ಬೆಡ್ ಮೇಲೆ ಕುಳಿತುಕೊಂಡು ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಇದರ ಬೆನ್ನಲ್ಲೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಕೂಡ ಜೈಲು ಅಧಿಕಾರಿ ಸೇರಿದಂತೆ ಒಟ್ಟು 7 ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನೊಂದು ಮಾಹಿತಿ ಪ್ರಕಾರ ನಟ ದರ್ಶನ್ ಅವರನ್ನು ಮತ್ತೊಂದು ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.