ಬೆಂಗಳೂರು : ಹಿಂದೂ ವಿರೋಧಿ ಭಾಷಣದ ಹೇಳಿಕೆಗಳಿಗೆ ಡಿಜೆ ಹಾಕಿ ರಸ್ತೆಯಲ್ಲೇ ತಲ್ವಾರ್, ಲಾಂಗು, ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ್ದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಸೋಮೇಶ್ವರ ನಗರದಲ್ಲಿ ನಡೆದಿದೆ.
ಅಕ್ಟೋಬರ್. 09ಕ್ಕೆ ಈದ್ಮಿಲಾದ್ ಹಬ್ಬ ಸಂಭ್ರಮದ ದಿನದಂದು ನಡೆದಿದ್ದು, ತಲ್ವಾರ್ ಹಿಡಿದುಕೊಂಡು ಹಾಡಹಗಲೇ ಮುಸ್ಲಿಂ ಮುಖಂಡರು ಕುಣಿದು ಕುಪ್ಪಳಿಸಿದ್ದಾರೆ. ಈ ಘಟನೆಯ ಸಂಬಂಧಿಸಿ ಬಂಧಿತ 19 ಜನರಲ್ಲಿ 14 ಜನರು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಈಗಾಗಲೇ ಸಿದ್ದಾಪುರ ಠಾಣೆ ಎದುರು ಕುಟುಂಬಸ್ಥರ ಜಮಾಯಿಸಿದ್ದಾರೆ.