ಕೋಲಾರ: ಜಿಲ್ಲೆಯಲ್ಲಿ ದಲಿತ ಯವಕನೊಬ್ಬ ದೇವರ ಮೆರವಣಿಗೆ ವೇಳೆ ಮೂರ್ತಿ ಮುಟ್ಟಿದನೆಂದು ಆ ಕುಟುಂಬಕ್ಕೆ 60ಸಾವಿರ ರೂಪಾಯಿ ದಂಡವನ್ನ ಗ್ರಾಮಸ್ಥರು ಹಾಕಿದ್ದಾರೆ. ಈ ಘಟನೆ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೋಭಾ ಹಾಗೂ ರಮೇಶ್ ದಂಪತಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ದಂಡ ಹಾಕಲಾಗಿದೆ.ಕಳೆದ 10 ದಿನಗಳ ಹಿಂದೆ ಗ್ರಾಮದ ಭೂತಮ್ಮ ದೇವರ ಮೂರ್ತಿ ಮೆರವಣಿಗೆ ವೇಳೆ 15 ವರ್ಷದ ಬಾಲಕ ಚೇತನ್ ದೇವರ ಉತ್ಸವ ಮೂರ್ತಿಗಳನ್ನ ಮುಟ್ಟಿದ್ದಾನೆ. ದಲಿತರು ಮೂರ್ತಿ ಮುಟ್ಟಿದ್ದಕ್ಕೆ ಮೈಲಿಗೆಯಾಗಿದೆ. ಮತ್ತೊಮ್ಮೆ ಬಣ್ಣ ಬಳಿಸಬೇಕು. ಹೀಗಾಗಿ ದಂಡ ಕಟ್ಟಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದಂಡ ಕಟ್ಟಲು ಆಗದಿದ್ದರೆ, ಊರು ಬಿಟ್ಟು ಹೋಗುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ವೆಂಕಟೇಶ್ ಹಾಗೂ ನಾರಾಯಣಸ್ವಾಮಿ ಸೇರಿದಂತೆ 8 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಆದರೆ ಗ್ರಾಮಸ್ಥರು ಆರೋಪ ತಳ್ಳಿ ಹಾಕಿದ್ದಾರೆ.