ದಕ್ಷಿಣಕನ್ನಡ : 13 ವರ್ಷದ ಹಳೆಯ ಕೇಸ್ ನಲ್ಲಿ ಪತ್ನಿ ಹಾಗೂ ಮಗುವಿನ ಕೋಲೆ ಕೇಸ್ ಪ್ರಕರಣದಲ್ಲಿ ಪತಿಯ ಕೈವಾಡವಿದೆ ಎಂದು ಶಂಕಿಸಿ ಆತನನ್ನು ಕೊಲ್ಲಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ಕಚೇರಿ ಬಳಿ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.
ಉಳ್ಳಾಲದಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ಕಚೇರಿ ಬಳಿ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಹಮೀದ ಎನ್ನುವ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಗೈಯಲು ಪ್ರಯತ್ನ ನಡೆಸಲಾಗಿದೆ.2011 ರಲ್ಲಿ ಅವಳಿ ಕೊಲೆ ಕೇಸ್ ನಲ್ಲಿ ಮೃತಪಟ್ಟಿದ್ದ ಮಹಿಳೆಯ ಪತಿಯ ಹತ್ಯೆಗೆ ಯತ್ನಿಸಲಾಗಿದೆ ಎನ್ನಲಾಗಿದೆ.
2011 ರಲ್ಲಿ ರಜಿಯಾ ಮಗು ಫಾತಿಮಾ ರುಜಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೂರಿಯಿಂದ ಇರಿದು ರಜಿಯಾ ಮಗು ಫಾತಿಮಾ ಕೊಲೆಯಾಗಿದ್ದರು. ಕರಾವಳಿ ಭಾಗದಲ್ಲಿ ಪಂಜಿ ಮೊಗುರ್ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು.ಹತ್ಯೆಯಾದ ರಜಿಯಾ ಪತಿ ಹಮೀದ್ ವಿರುದ್ಧ ಆರೋಪ ಕೇಳಿಬಂದಿತ್ತು.ಪತಿ ಹಮೀದ್ ಮನೆಯಿಂದ ಹೊರಹೋದ ಬಳಿಕ 30 ನಿಮಿಷ ನಂತರ ಹತ್ಯೆಯಾಗಿತ್ತು.
13 ವರ್ಷ ಕಳೆದರೂ ಅವಳಿ ಕೊಲೆ ಕೇಸ್ ನ ಆರೋಪಿಗಳು ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರ ಜೊತೆ ಸಿಐಡಿ ತನಿಖೆ ಆದರೂ ಕೂಡ ಹಂತಕರು ಸಿಕ್ಕಿಲ್ಲ ಪೊಲೀಸರ ತನಿಖೆಯಲ್ಲಿ ಹಮೀದ್ ಕೈವಾಡವಿಲ್ಲವೆಂದು ವರದಿ ಬಂದಿತ್ತು. ಇದೀಗ ಹಮೀದ್ಗೆ ಚೂರಿಯಿಂದ ಇರಿದು ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ.ಸದ್ಯ ಹಮೀದ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರಿನ ಖ್ಯಾತ ಈಜು ಪಟು ಜಾವೇದಿಂದ ಈ ಕೃತಿ ನಡೆದಿದೆ ಎಂದು ಹೇಳಲಾಗುತ್ತಿದೆ.