ದಕ್ಷಿಣಕನ್ನಡ : ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಶಾಲಾ ಕಾಂಪೌಂಡ್ ಕುಸಿದು ಬಿದ್ದು ಮೂರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ಶಾಲಾ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಈ ಶಾಲೆಯನ್ನು ಕಟ್ಟಿದ್ದಾರೆ ಎನ್ನಲಾಗುತ್ತಿದೆ.ಗ್ರಾಮದ ಸಿದ್ದಿಕ್ ಜಮೀಲಾ ಪುತ್ರಿ ಶಾಜಿಯ (7) ಸಾವನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
3ನೇ ತರಗತಿಯಲ್ಲಿ ಮೃತ ವಿದ್ಯಾರ್ಥಿನಿ ಶಾಜಿಯ ಓದುತ್ತಿದ್ದಳು. ಶಾಲೆಯಲ್ಲಿ ಎನ್ಎಸ್ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿ ಭಾಗಿಯಾಗಿದ್ದಳು. ಆಟವಾಡುತ್ತಿದ್ದಾಗ ಕಾಂಪೌಂಡ್ ಕುಸಿದು ಬಿದ್ದು ಶಾಜಿಯ ದಾರುಣವಾಗಿ ಸಾವನಪ್ಪಿದ್ದಾಳೆ.
ನ್ಯೂಪಡ್ಪು ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಜಿಯಾ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದಳು. ಬಾಲಕಿಯು ಗೇಟಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಆವರಣ ಗೋಡೆಯು ಆಕೆಯ ಮೇಲೆ ಕುಸಿದು ಬಿದ್ದಿತ್ತು. ಮಳೆಯಿಂದಾಗಿ ಆವರಣಗೋಡೆ ಒದ್ದೆಯಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.