Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್‌ನಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ: ‘ಸರ್ವಾಧಿಕಾರಿಗೆ ಸಾವು’ ಘೋಷಣೆ, ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಸಂಘರ್ಷ!

23/02/2026 1:38 PM

BREAKING : ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ದರೋಡೆಗೆ ಸ್ಕೆಚ್ : ಸೈರನ್ ಶಬ್ದಕ್ಕೆ ಬೆದರಿ ಕಳ್ಳ ಪರಾರಿ!

23/02/2026 1:35 PM

BREAKING : ‘ತಿರುಪತಿ ಲಡ್ಡು’ ಕಲಬೆರಕೆ ಕೇಸ್ : ಆಂಧ್ರಪ್ರದೇಶ ಸರ್ಕಾರದ ತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್.!

23/02/2026 1:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಡಿ.ಕೆ ಶಿವಕುಮಾರ್ ಸಿಎಂ ಆಗ್ಬೇಕು: ಡಿಸಿಎಂ ಪರ ಬ್ಯಾಟ್ ಬೀಸಿದ ಶಾಸಕ ಕದಲೂರು ಉದಯ್
KARNATAKA

BIG NEWS: ಡಿ.ಕೆ ಶಿವಕುಮಾರ್ ಸಿಎಂ ಆಗ್ಬೇಕು: ಡಿಸಿಎಂ ಪರ ಬ್ಯಾಟ್ ಬೀಸಿದ ಶಾಸಕ ಕದಲೂರು ಉದಯ್

By kannadanewsnow0921/11/2025 2:58 PM

ಮಂಡ್ಯ: ಭವಿಷ್ಯದಲ್ಲಿ ಪಕ್ಷ ಸಂಘಟನೆ ಡಿಕೆಶಿಗೆ ಸಿಎಂ ಪಟ್ಟ ಸಿಗಬೇಕು. ಕೊಟ್ಟ ಮಾತಿಗೆ ಹೈಕಮಾಂಡ್ ತಪ್ಪಬಾರದು. ಡಿಕೆಶಿ ಶ್ರಮಕ್ಕೆ ತಕ್ಕ ಫಲ ಸಿಗಬೇಕು ಎಂಬುದಾಗಿ ಡಿಕೆಶಿ ಪರ ಶಾಸಕ ಕದಲೂರು ಉದಯ್ ಬ್ಯಾಟ್ ಬೀಸಿದ್ದಾರೆ.

ಇಂದು ಡಿಸಿಎಂ ಡಿಕೆಶಿ ಸಿಎಂ ಚರ್ಚೆ ವಿಚಾರವಾಗಿ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ, ಹೈಕಮಾಂಡ್ ಮಟ್ಟದಲ್ಲಿ ಇದು ತೀರ್ಮಾನ ಆಗಿರುತ್ತೆ. ಒಬ್ಬೊಬ್ಬರು ಒಂದೊಂದು ಮಾತು ಹೇಳ್ತಾರೆ ಅಷ್ಟೆ. ಇದಕ್ಕೆಲ್ಲ ಹೈಕಾಮಂಡ್ ಪರಿಹಾರ ಕೊಡಬೇಕು. ಬಹಳಷ್ಟು ಶಾಸಕರಿಗೆ ಅಭಿಲಾಷೆ ಇದೆ ಆ ನಿಟ್ಟಿನಲ್ಲಿ ದೆಹಲಿಗೆ ಶಾಸಕರು ಹೋಗಿದ್ದಾರೆ ಅಷ್ಟೆ. ಪಕ್ಷಕ್ಕೆ ದಕ್ಕೆ ಆಗಬಾರದು ಅನ್ನೊ ನಿಟ್ಟಿನಲ್ಲಿ ಭೇಟಿ. ಸಿಎಂ ಚರ್ಚೆ ವಿಚಾರಕ್ಕೆ ತೆರೆ ಹೆಳೆಯೋದಕ್ಕೆ ಭೇಟಿ ಎಂದರು.

ನಮಗಿಂತ ವಿರೋಧ ಪಕ್ಷದವರೇ ಹೆಚ್ಚು ಚರ್ಚೆ ಮಾಡ್ತಿದ್ದಾರೆ. ನಮ್ಮ ಪಾರ್ಟಿ ತೀರ್ಮಾನ ವಿರೋಧ ಪಕ್ಷಕ್ಕೆ ಏನು ಸಂಬಂಧ? 140 ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ ಯಾವುದೇ ಅನುಮಾನ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಈ ಚರ್ಚೆ ಬೇಡ ತೆರೆ ಎಳೆಯಿರಿ ಅನ್ನೋದಕ್ಕೆ ಕೆಲವರು ಹೋಗಿದ್ದಾರೆ. ಡಿಕೆಶಿ ಅವರಿಗೆ ಸಿಎಂ ಕೊಡಬೇಕು ಅನ್ನೋ ಬೇಡಿಕೆ ಇದೆ. ಭವಿಷ್ಯದಲ್ಲಿ ಪಕ್ಷ ಸಂಘಟಿಸುವ ದೃಷ್ಟಿಯಿಂದ ಅವಕಾಶ ಕೊಡಬೇಕು ಎಂದರು.

ಸಿದ್ದರಾಮಯ್ಯ ಅವರ ಆಡಳಿತ, ನಾಯಕತ್ವದ ಬಗ್ಗೆ ಯಾರು ಪ್ರಶ್ನೆ ಮಾಡ್ತಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಬೇಕು. ನಮಗೆ ಸಾಕಷ್ಟು ಮಾಡಲು ಕೆಲಸ ಇದೆ. ಸುಮ್ಮನೆ ನಿತ್ಯ ಇದೇ ಚರ್ಚೆ ಅವಶ್ಯಕತೆ ಇಲ್ಲ. ನಾವು ಅಭಿವೃದ್ಧಿ ಬಗ್ಗೆ ಗಮನ ಕೊಡೋದು ಹೇಗೆ? ಕಾಂಗ್ರೆಸ್ ಪಕ್ಷ ಸಂಘಟನೆಗೆ ಮಾಡ್ಕೊಂಡು ಬಂದಿದ್ದಾರೆ.ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. 2028ಕ್ಕೆ ನಮ್ಮ ಸರ್ಕಾರ ಬರಬೇಕು ಎಚ್ಚೆತ್ತು ನಾವು ಕೆಲಸ ಮಾಡಬೇಕು ಎಂದರು.

ವಿರೋಧ ಪಕ್ಷದವರು ಬಾಯಿಗೆ ಬಂದಾಗೆ ಮಾತ್ನಾಡ್ತಾರೆ. ನಮ್ಮ ಪಕ್ಷ ಸಂಘಟನೆ ಮಾಡಬೇಕು. ಬೇರೆಯವರ ಬಾಯಿಗೆ ತುತ್ತಾಗಬಾರದು. ಡಿಕೆಶಿ ಸಿಎಂ ಹೈಕಾಮಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ದ. ಎರಡೂವರೆ ವರ್ಷ ಬದಲಾವಣೆ ಅನ್ನೋ ಮಾತುಕತೆ ನಮಗೆ ಗೊತ್ತಿಲ್ಲ. ಮಾತು ಕೊಟ್ಟಿದ್ರೆ ಉಳಿಸಿಕೊಳ್ಳಬೇಕು ಕೊಟ್ಟ ಮಾತಿಗೆ ತಪ್ಪಬಾರದು. ಹೈಕಮಾಂಡ್ ಮಾತು ಕೊಟ್ಟಿದ್ರೆ ಉಳಿಸಿಕೊಳ್ಳಲಿ. ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಬಿಡಿ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ನಾಯಕರೇ ಪರ ವಿರೋಧ ಬರಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡ್ತೇವೆ. ಅಭಿಮಾನ ಇಬ್ಬರ ಮೇಲು ಇರುತ್ತೆ. ಅಂತಿಮವಾಗಿ ಪಕ್ಷದ ನಿರ್ಧಾರವೇ ಅಂತಿಮ ನಿರ್ಧಾರ ಮಾಡಲಿದೆ. ಯಾರ ಯಾರ ಅತ್ರ ಶಕ್ತಿ ಏನು ಅಂತ ನೊಡ್ತಿದ್ದಾರೆ. ಇಲ್ಲಿ ಸಂಖ್ಯೆ ಆಧಾರದ ಮೇಲೆ ನಿರ್ಧಾರ ಆಗಲ್ಲ. ಸಿದ್ದರಾಮಯ್ಯ ಅವರಿಗೆ ವರ್ಚಸ್, ಅವರದೇ ಓಟ್ ಬ್ಯಾಂಕ್ ಇತ್ತು ನೋಡಿ ಅವರ ಅನುಭವದ ಮೇಲೆ ಅವಕಾಶ ಕೊಟ್ಟರು. ಮುಂದೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದಾಗಿ ಹೇಳಿದರು.

ವರದಿ: ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ದರೋಡೆಗೆ ಸ್ಕೆಚ್ : ಸೈರನ್ ಶಬ್ದಕ್ಕೆ ಬೆದರಿ ಕಳ್ಳ ಪರಾರಿ!

23/02/2026 1:35 PM1 Min Read

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

23/02/2026 1:20 PM1 Min Read

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM2 Mins Read
Recent News

ಇರಾನ್‌ನಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ: ‘ಸರ್ವಾಧಿಕಾರಿಗೆ ಸಾವು’ ಘೋಷಣೆ, ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಸಂಘರ್ಷ!

23/02/2026 1:38 PM

BREAKING : ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ದರೋಡೆಗೆ ಸ್ಕೆಚ್ : ಸೈರನ್ ಶಬ್ದಕ್ಕೆ ಬೆದರಿ ಕಳ್ಳ ಪರಾರಿ!

23/02/2026 1:35 PM

BREAKING : ‘ತಿರುಪತಿ ಲಡ್ಡು’ ಕಲಬೆರಕೆ ಕೇಸ್ : ಆಂಧ್ರಪ್ರದೇಶ ಸರ್ಕಾರದ ತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್.!

23/02/2026 1:28 PM

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

23/02/2026 1:20 PM
State News
KARNATAKA

BREAKING : ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ದರೋಡೆಗೆ ಸ್ಕೆಚ್ : ಸೈರನ್ ಶಬ್ದಕ್ಕೆ ಬೆದರಿ ಕಳ್ಳ ಪರಾರಿ!

By kannadanewsnow5723/02/2026 1:35 PM KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಮತ್ತೊಂದು ಪ್ರತಿಷ್ಠಿತ ಬ್ಯಾಂಕ್ ದರೋಡೆಗೆ ನಡೆಸಿದ್ದ ಪ್ರಯತ್ನವೊಂದು ಕೂದಲೆಳೆ ಅಂತರದಲ್ಲಿ ವಿಫಲವಾಗಿದೆ. ನಗರದ ಶೇಷಾದ್ರಿಪುರಂನಲ್ಲಿರುವ…

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

23/02/2026 1:20 PM

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM

ನೀವು ಕೊಟ್ಟ `ಸಾಲ’ ವಾಪಸ್ ಕೊಡಲು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಮಾರ್ಗಗಳು

23/02/2026 12:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.