ಮೈಸೂರು : ಕೊರೊನಾ ಆರ್ಭಟ ಕಡಿಮೆಯಾದ ಹಿನ್ನೆಲೆ ಈ ಬಾರಿ ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಸಲಾಗಿತ್ತು.ಈ ಬೆನ್ನಲ್ಲೆ ಡಿಸೆಂಬರ್ 24ರಿಂದ ಜನವರಿ 2ವರೆಗೆ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.
BIGG NEWS : ಕಿಲ್ಲರ್ ‘BMTC’ ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಬಸ್ ಹರಿದು ಬೈಕ್ ಸವಾರ ಸಾವು
ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗಾಗಿ ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿದ್ಯುತ್ ದೀಪಾಲಂಕಾರ, ಪೊಲೀಸ್ ಬ್ಯಾಂಡ್, ಶಬ್ಧರಹಿತ ಪಟಾಕಿ ಸಿಡಿಸುವುದೂ ಸೇರಿದಂತೆ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಂಜೆ 7ರಿಂದ 9ರವರೆಗೆ ಅರಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
BIGG NEWS : ಕಿಲ್ಲರ್ ‘BMTC’ ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಬಸ್ ಹರಿದು ಬೈಕ್ ಸವಾರ ಸಾವು
ಇನ್ನೂ ಫಲಪುಷ್ಪ ಪ್ರದರ್ಶನಕ್ಕಾಗಿ ಸುಮಾರು 25,000 ಬಗೆಯ ಅಲಂಕಾರಿಕ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. (ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸ್ವಿಲೋಷಿಯ, ನಸ್ಪರ್ಸಿಯಂ, ಆಂಟಿರೈನಂ, ಬೋನ್ಸಾತ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡ) ಹಾಗೂ ಅಂದಾಜು 4 ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೈಸಾಂಥಿಯಮ್, ಪಿಂಗ್ ಪಾಂಗ್, ಕಾರ್ನೆಷನ, ಆಸ್ಪ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಸೇರಿ ನಾನಾ ಬಗೆಯ ಅಲಂಕಾರಿಕ ಹೂಗಳಿಂದ ಅಲಂಕರಿಸಲಾಗುತ್ತದೆ.
BIGG NEWS : ಕಿಲ್ಲರ್ ‘BMTC’ ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಬಸ್ ಹರಿದು ಬೈಕ್ ಸವಾರ ಸಾವು
ಈ ಭಾರೀ ಹೂಗಳಲ್ಲಿ ಅರಳಲಿರುವ ಕಾಶಿ ವಿಶ್ವನಾಥ ದೇವಾಸ್ಥಾನ ಮಾದರಿ ಈ ಬಾರಿ ಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ಯಾಗಿದೆ. ಡಿಸೆಂಬರ್ 24ರಿಂದ ಜನವರಿ 2ವರೆಗೆ ನಡೆಯುವ ಮೈಸೂರು ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.