ಹಾವೇರಿ : ರಾಜ್ಯದಲ್ಲಿ ಸಿಲಿಂಡರ್ ಅಭಾವದಿಂದ ಜನರು ಸೌದೆ ಒಲೆ ಮೊರೆ ಹೋಗಿದ್ದಾರೆ. ಆದರೆ ಶಾಲೆ ಅಡುಗೆ ಕೋಣೆ ಬೀಗ ಮರಿದು ಕಿಡಿಗೇಡಿಗಳು ಸಿಲಿಂಡರ್ ಗಳನ್ನು ಕದ್ದು ತೆಗೆದು ಕೊಂಡು ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಶ್ರೀಕಾಂತ್ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ ಶಾಲೆ ಸಿಲಿಂಡರ್ ಗಳನ್ನು ಕಳ್ಳತನ ಮಾಡಲಾಗಿದೆ ಸಿಲಿಂಡರ್ ಬಳಸಲಾಗುತ್ತಿತ್ತು ಆದರೆ ಸಿಲಿಂಡರ್ ಕೊರತೆ ಎದ್ದು ಕಾಣುತ್ತಿದ್ದರಿಂದ ಕಳ್ಳರು ಬಿಸಿ ಊಟಕ್ಕೆ ಬಳಸುತ್ತಿದ್ದ ಸಿಲಿಂಡರ್ ಗಳನ್ನು ಕದ್ದು ಒಯ್ದಿದ್ದಾರೆ. ಘಟನೆ ಕುರಿತಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








