ತಮಿಳುನಾರು : ಮಾಂಡೌಸ್ ಚಂಡಮಾರುತ ಆರ್ಭಟ ಹೆಚ್ಚಾದ ಹಿನ್ನೆಲೆ ಭಾರೀ ಮಳೆ ಸುರಿಯುತ್ತಿದೆ ಈ ನಿಟ್ಟಿನಲ್ಲಿ ತಮಿಳುನಾಡಿನ 2 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ
ಕಳೆದ 2-3 ದಿನಗಳಿಂದ ಗಾಳಿ, ಚಳಿಗೆ ಜನರಿಗೆ ಮನೆಯಿಂದ ಆಚೇ ಬರೋದಕ್ಕೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಮಳೆಗೆ ರಸ್ತೆಗಳು ಜಲಾವೃತಗೊಂಡಿದೆ. ಇನ್ನೂ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಹಲವೆಡೆ ಭೂಕುಸಿತ ಉಂಟಾಗಿದೆ. ನೂರಾರು ಮರಗಳು ಧರೆಗುರುಳಿದೆ. ಇದರಿಂದ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ ತಮಿಳುನಾಡು ಸುತ್ತಮುತ್ತ ಜನ ಜೀವನ ಅಸ್ತವ್ಯಸ್ಥಗೊಂಡಿದೆ
ಈ ನಿಟ್ಟಿನಲ್ಲಿ ಐಎಂಡಿ ಮುನ್ಸೂಚನೆಯ ಆಧಾರದ ಮೇಲೆ ಕಾಂಚೀಪುರಂ ಜಿಲ್ಲೆಯಲ್ಲದೆ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಶಾಲೆಗಳು ಇಂದು ರಜೆ ಘೋಷಣೆ ಮಾಡಲಾಗಿದೆ.
ಮಂಡೂಸ್ ಚಂಡಮಾರುತವು ಈಗಾಗಲೇ ರಾಜ್ಯದ ವಿವಿಧ ಪ್ರದೇಶಗಳ ಮೇಲೆ ಪರಿಣಾಮ ಬೀರಿದ್ದು, ಮಾಮಲ್ಲಪುರಂನಲ್ಲಿ ಕರಾವಳಿಯನ್ನು ದಾಟಿರುವುದರಿಂದ ಇಂದು ಕೂಡ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳ ಎಲ್ಲಾ ಶಾಲೆಗಳಿಗೂ ರಜೆ ನೀಡಲಾಗಿದೆ.
ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಳ, ನಿರಂತರ ಮಳೆಯ ಮುನ್ಸೂಚನೆಯಿಂದಾಗಿ ತಿರುವಳ್ಳೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು (ಡಿಸೆಂಬರ್ 13) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿರುವಳ್ಳೂರು ಮಾಹಿತಿ ನೀಡಿದ್ದಾರೆ . ಡಿಸೆಂಬರ್ 15 ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.