ನವದೆಹಲಿ: ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕ್ಲಿಸ್ಟ್ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.
ಸುಭೇಂದು ಚಟರ್ಜಿ (50) ಅವರು ಮಹಿಪಾಲ್ಪುರ ಮೇಲ್ಸೇತುವೆ ಬಳಿ ಸೈಕ್ಲಿಂಗ್ ಮಾಡುವಾಗ ಬಿಳಿ ಐಷಾರಾಮಿ ಸೆಡಾನ್ ಡಿಕ್ಕಿ ಹೊಡೆದಿದೆ. ಪೊಲೀಸರ ಪ್ರಕಾರ, ಕಾರಿನ ಚಾಲಕ ಟೈರ್ ಸ್ಫೋಟಗೊಂಡ ನಂತರ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಹೇಳಿದರು. ಸೈಕ್ಲಿಸ್ಟ್ ಅನ್ನು ಕೂಡಲೇ ಕಾರಿನ ಚಾಲಕ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸುಭೇಂದು ಚಟರ್ಜಿ ಗುರುಗ್ರಾಮ್ ನಿವಾಸಿಯಾಗಿದ್ದು, ದೆಹಲಿಯ ಧೌಲಾ ಕುವಾನ್ ಕಡೆಗೆ ಸವಾರಿ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ಮಾಲೀಕ ಪಂಜಾಬಿ ಬಾಗ್ ನಿವಾಸಿಯಾಗಿದ್ದಾರೆ. ಅಪಘಾತದ ಸಮಯದಲ್ಲಿ, ಕಾರು ಗುರುಗ್ರಾಮ್ನಿಂದ ದೆಹಲಿಗೆ ಬರುತ್ತಿತ್ತು. ಈ ಕಾರನ್ನು ಚಾಲಕ ಸೋಮ್ವಿರ್ ಚಾಲನೆ ಮಾಡುತ್ತಿದ್ದ. ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BMW ವಿಐಪಿ ನೋಂದಣಿ ಫಲಕವನ್ನು ಹೊಂದಿತ್ತು. ಅದರ ಮೇಲೆ “ಅಧ್ಯಕ್ಷ ಹಣಕಾಸು ಸಮಿತಿ, ದೆಹಲಿ ಕಂಟೋನ್ಮೆಂಟ್ ಬೋರ್ಡ್” ಎಂದು ಸ್ಟಿಕ್ಕರ್ ಇತ್ತು.
ಪೊಲೀಸರು ಚಾಲಕನ ವಿರುದ್ಧ ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣವನ್ನು ದಾಖಲಿಸಿದ್ದಾರೆ. ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.
BREAKING NEWS : ವಿಜಯಪುರದಲ್ಲಿ ಘೋರ ದುರಂತ : ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಪಂಜಾಬ್ : ಹಳಿ ಮೇಲೆ ಆಟವಾಡುತ್ತಿದ್ದ ಮಕ್ಕಳಿಗೆ ರೈಲು ಡಿಕ್ಕಿ: ಮೂವರು ಸಾವು
BREAKING NEWS : ವಿಜಯಪುರದಲ್ಲಿ ಘೋರ ದುರಂತ : ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಬಾಗಲಕೋಟೆ: ವೃದ್ಧ ನುಂಗಿದ್ದ 187 ನಾಣ್ಯಗಳನ್ನ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು!