ದಾವಣಗೆರೆ: ಭಾರತದ ವಿವಿಧ ಭಾಗಗಳ ಜನರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 150 ಕೋಟಿ ಎಗರಿಸಿದ್ದಂತ ಸೈಬರ್ ವಂಚಕನನ್ನು ಬಂಧಿಸುವಲ್ಲಿ ದಾವಣಗೆರೆಯ ಸೈಬರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ದಾವಣಗೆರೆಯ ಸೈಬರ್ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೈಬರ್ ವಂಚನೆ ಸಂಬಂಧ 2ನೇ ಆರೋಪಿ ಸೈಯದ್ ಅರ್ಫಾತ್(28) ಬಂಧಿಸಿದ್ದಾರೆ. ಬಂಧಿತ ಆರೋಪಿ ಹಾಸನ ಜಿಲ್ಲೆಯ ಬೇಲೂರಿನ ಶಾಂತಿನಗರ ನಿವಾಸಿಯಾಗಿದ್ದು, ಸಿಸಿಟಿವಿ ಕೆಲಸ ಮಾಡಿಕೊಂಡಿದ್ದನು. ಇನ್ನೂ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಬಂಧಿತ ಆರೋಪಿ ಸೈಯದ್ ಅರ್ಫಾತ್ ಮೊಬೈಲ್ ಪರಿಶೀಲಿಸಿದಾಗ ಆರೋಪಿತರ ಖಾತೆಯಲ್ಲಿ ಜುಲೈ.27 ರಿಂದ ಆಗಸ್ಟ್.19ರವರೆಗೆ ಸುಮಾರು 150 ಕೋಟಿ ರೂಪಾಯಿ ಆನ್ ಲೈನ್ ವಂಚನೆಯ ಹಣ ಜಮಾ ಆಗಿದೆ. ಈಗಾಗಲೇ ಆರೋಪಿಗಳು 132 ಕೋಟಿ ರೂಪಾಯಿ ಹಣ ಡ್ರಾ ಮಾಡಿದ್ದು, 18 ಕೋಟಿ ಖಾತೆಯಲ್ಲೇ ಇದ್ದದ್ದನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಪೊಲೀಸರು ಸೈಬರ್ ಕಳ್ಳನ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿದ್ದಾರೆ.
ಆರೋಪಿ ಸಿಕ್ಕಿ ಬಿದ್ದಿದ್ದೇಗೆ?
ಸೈಬರ್ ವಂಚಕ ಸೈಯದ್ ಅರ್ಫಾತ್ ದಾವಣಗೆರೆಯ ನಿಟ್ಟುವಳ್ಳಿಯಲ್ಲಿನ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದಂತ ಗ್ರಾಹಕ ಪ್ರಮೋದ್ ಅವರ 52,60,523 ಹಣವನ್ನು ಎಗರಿಸಿದ್ದರು. ಹೀಗಾಗಿ ಪ್ರಮೋದ್ ದಾವಣಗೆರೆಯ ಸೈಬರ್ ಕ್ರೈ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಬೆನ್ನತ್ತಿದಂತ ಪೊಲೀಸರಿಗೆ ಸೈಬರ್ ವಂಚಕರ ಬಹುದೊಡ್ಡ ಜಾಲವನ್ನೇ ಪತ್ತೆ ಪಚ್ಚಿದಂತೆ ಆಗಿದೆ.
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ