ನವದೆಹಲಿ: ಕಳೆದ ಬಾರಿ ಡ್ಯಾಂಗಳಲ್ಲಿ ನೀರು ಇಲ್ಲದ ಕಾರಣ, ತಮಿಳುನಾಡಿಗೆ ನೀರು ಬಿಡೋದಕ್ಕೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಸೂಚಿಸಿರಲಿಲ್ಲ. ಆದ್ರೇ ಈಗ ಮತ್ತೆ 2.5 ಟಿಎಂಸಿ ನೀರು ಹರಿಸುವಂತೆ CWMA ಸೂಚಿಸಿದೆ.
ಕುಡಿಯೋದಕ್ಕೆ, ಬೆಳೆಗಳಿಗೆ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮನವಿ ಮಾಡಿತ್ತು. ಇಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆದಂತ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಾದ, ಪ್ರತಿವಾದ ಆಲಿಸಿತು.
ಅಂತಿಮವಾಗಿ ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಆದೇಶಿಸಿದೆ. ಈ ಮೂಲಕ ಕರ್ನಾಟಕಕ್ಕೆ ಬಿಗ್ ಶಾಕ್ ನೀಡಲಾಗಿದೆ.
ಅಂದಹಾಗೇ ಕರ್ನಾಟಕ ರಾಜ್ಯದ ಡ್ಯಾಂಗಳಲ್ಲಿ ನೀರಿಲ್ಲ. ಹೀಗಿರುವಾಗ ನೀರು ಹೇಗೆ ಹರಿಸಲಿ ಅಂತ ವಾದಿಸಿತ್ತು. ಆದ್ರೇ ಈ ವಾದವನ್ನು ಪುರಸ್ಕರಿಸದಂತ ಸಿ ಡಬ್ಲ್ಯೂ ಎಂಎ, ಮತ್ತೆ 2.5 ಟಿಎಂಸಿ ನೀರು ಹರಿಸುವಂತೆ ಆದೇಶಿಸಿ, ಶಾಕ್ ಮೇಲೆ ಶಾಕ್ ನೀಡಿದೆ.