ನವದೆಹಲಿ : ಕಾಮನ್ವೆಲ್ತ್ ಗೇಮ್ಸ್ನ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಚಿನ್ನ ಗೆದ್ದ ಸುಧೀರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಸುಧೀರ್ ಅವರಿಂದ ಕಾಮನ್ವೆಲ್ತ್ ಗೇಮ್ಸ್ನ ಪ್ಯಾರಾ-ಸ್ಪೋರ್ಟ್ಸ್ ಪದಕಗಳ ಎಣಿಕೆಗೆ ಉತ್ತಮ ಆರಂಭವಾಗಿದೆ. ಪಂದ್ಯದಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಸಪರ್ಪಣೆಯನ್ನು ತೋರಿಸಿದ್ದಾರೆ.ಅವರು ನಿರಂತರವಾಗಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ ಎಲ್ಲಾ ಪ್ರಯತ್ನಗಳಿಗಾಗಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಬರೆದಿದ್ದಾರೆ.
A great start to the CWG 2022 para-sports medal count by Sudhir! He wins a prestigious Gold and shows yet again his dedication and determination. He has been consistently performing well on the field. Congratulations and best wishes to him for all upcoming endeavours. pic.twitter.com/6V2mXZsEma
— Narendra Modi (@narendramodi) August 5, 2022
ಗುರುವಾರ, ಸುಧೀರ್ ಅವರು 134.5 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದರು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ದಾಖಲೆ ಬರೆದಿದ್ದಾರೆ. ಇಕೆಚುಕ್ವು ಕ್ರಿಶ್ಚಿಯನ್ ಒಬಿಚುಕ್ವು ಒಟ್ಟು 133.6 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಮಿಕ್ಕಿ ಯೂಲ್ ಒಟ್ಟು 130.9 ಅಂಕಗಳೊಂದಿಗೆ ಕಂಚಿನೊಂದಿಗೆ ಪಂದ್ಯವನ್ನು ಮುಗಿಸಿದರು.
2013 ರಲ್ಲಿ, ಸುಧೀರ್ ಸೋನಿಪತ್ನಲ್ಲಿ ಪವರ್ಲಿಫ್ಟಿಂಗ್ ಪ್ರಾರಂಭಿಸಿದರು. ಅಂದಿನಿಂದ ಮುನ್ನೆಡೆಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಜೂನ್ನಲ್ಲಿ, ಅವರು ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಪ್ಯಾರಾ ಪವರ್ಲಿಫ್ಟಿಂಗ್ ಏಷ್ಯಾ-ಓಷಿಯಾನಿಯಾ ಓಪನ್ ಚಾಂಪಿಯನ್ಶಿಪ್ನಲ್ಲಿ ಪುರುಷರ 88 ಕೆಜಿ ವರೆಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ.