ನವದೆಹಲಿ : 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಜೂಡೋ ಪಟು ತುಲಿಕಾ ಮಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪದಕವು ಅವರ ವಿಶಿಷ್ಟ ಕ್ರೀಡಾ ವೃತ್ತಿಜೀವನದಲ್ಲಿ ಮತ್ತೊಂದು ಪುರಸ್ಕಾರವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಪ್ರಧಾನಿಯವರು ಟ್ವೀಟ್ ಮಾಡಿದ್ದು, ಬರ್ಮಿಂಗ್ಹ್ಯಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ತುಲಿಕಾ ಮಾನ್ ಮಿಂಚಿದ್ದಾರೆ. ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಆಕೆಗೆ ಅಭಿನಂದನೆಗಳು. ಈ ಪದಕವು ಅವರ ವಿಶಿಷ್ಟ ಕ್ರೀಡಾ ವೃತ್ತಿಜೀವನದಲ್ಲಿ ಮತ್ತೊಂದು ಪುರಸ್ಕಾರವಾಗಿದೆ. ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Tulika Maan shines at the Birmingham games! Congratulations to her on winning the Silver medal in Judo. This medal is yet another accolade in her distinguished sporting career. Wishing her the very best for her upcoming endeavours. pic.twitter.com/18AAHaMV0t
— Narendra Modi (@narendramodi) August 3, 2022
ಇತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಅಭಿನಂದಿಸಿದ್ದು,ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜೂಡೋದಲ್ಲಿ ಉತ್ಸಾಹಭರಿತವಾಗಿ ಹೋರಾಡಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ತುಲಿಕಾ ಮಾನ್ ಅವರಿಗೆ ಅಭಿನಂದನೆಗಳು. ನೀವು ಚಿಕ್ಕ ವಯಸ್ಸಿನಲ್ಲಿ ಯಶಸ್ವಿಯಾಗಲು ಗಮನಾರ್ಹವಾದ ಧೈರ್ಯ ಮತ್ತು ಉತ್ಸಾಹವನ್ನು ತೋರಿಸಿದ್ದೀರಿ. ನೀವು ಭವಿಷ್ಯದಲ್ಲಿ ಹೆಚ್ಚಿದ್ದನ್ನು ಸಾಧಿಸುವಂತಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಮಹಿಳೆಯರ 78 ಕೆಜಿ ವಿಭಾಗದ ಫೈನಲ್ನಲ್ಲಿ ಸ್ಕಾಟ್ಲೆಂಡ್ನ ಸಾರಾ ಅಡ್ಲಿಂಗ್ಟನ್ ವಿರುದ್ಧ ತುಲಿಕಾ ಅವರು ಬೆಳ್ಳಿ ಪದಕ ಪಡೆದರು. ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ತುಲಿಕಾ ಮಾನ್, ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೂರನೇ ಜೂಡೋಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.