ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬಕ್ಕೆ ಸಂಭ್ರಮ ಮನೆ ಮಾಡಿದೆ. ಎರಡು ವರ್ಷಗಳ ಕೊರೊನಾದಿಂದ ಬೇಸತ್ತಿದ್ದ ಜನರು ಇಂದು ನೆಮ್ಮದಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ.
BIGG NEWS: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ; ಅ. 25 ರಂದು ಬೆಂಗಳೂರಿನ ದೇವಾಲಯ ಬಂದ್
ಅದರಲ್ಲೂ ಸಿಟಿ ಜನತೆಗೆ ಇನ್ನೂ ಹಬ್ಬ ಜೋರು ಇರುತ್ತದೆ. ಈಗಾಗಲೇ ಜನರು ಸಿಟಿ ಮಾಕೆರ್ಟ್ ಬಳಿ ಹೂವು-ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ ಇನ್ನು ಹಬ್ಬದ ಖುಷಿಯಲ್ಲಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಿನ್ನೆ ಖಾಸಗಿ ಬಸ್ಗಳ ಟಿಕೆಟ್ ದರದಿಂದ ಕಂಗಾಲಾಗಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ದೀಪಾವಳಿ ಹಿನ್ನೆಲೆ ತರಕಾರಿ, ದಿನ ನಿತ್ಯ ಬಳಸುವ ಸಾಮಾಗ್ರಿಗಳು, ಪಟಾಕಿಗಳ ದರ ದುಬಾರಿಯಾಗಿದೆ.
BIGG NEWS: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ; ಅ. 25 ರಂದು ಬೆಂಗಳೂರಿನ ದೇವಾಲಯ ಬಂದ್
ಒಂದೇ ತಿಂಗಳಲ್ಲಿ ಎರಡು ದೊಡ್ಡ ಹಬ್ಬಗಳು ಬಂದಿವೆ. ಆದ್ರೆ ದಸರಾ ಹಬ್ಬದಷ್ಟು ಬೆಲೆ ಏರಿಕೆ ದೀಪಾವಳಿ ಹಬ್ಬಕ್ಕೆ ಇಲ್ಲ. ಸಿಲಿಕಾನ್ ಸಿಟಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಿಂದ ಬೆಳೆ ಹಾನಿಯಾಗಿದ್ದು ಕೊಂಚ ಬೆಲೆ ಏರಿಕೆಯಾಗಿದೆ.
ಕೆಆರ್ ಮಾರ್ಕೆಟ್ನಲ್ಲಿ ಇಂದಿನ ಹೂವು ಹಣ್ಣುಗಳ ದರ
ಮಲ್ಲಿಗೆ ಒಂದು KG- 500-550
ಕನಕಾಂಬರ 1200 KG
ಸೇವಂತಿಗೆ 200 -250 kg
ಗುಲಾಬಿ – 410 kg
ಸುಗಂಧರಾಜ 400 kg
ಚೆಂಡು ಹೂವು 160-170kg
ಇಂದಿನ ಹಣ್ಣುಗಳ ಬೆಲೆ
ಸೇಬು 100 kg
ದಾಳಿಂಬೆ 110 kg
ಮೂಸಂಬಿ 60 kg
ಆರೆಂಜ್ 100 kg
ಸಪೋಟ 90kg
ಸೀಬೆಹಣ್ಣು 150kg
ಏಲಕ್ಕಿ ಬಾಳೆಹಣ್ಣು 70kg
ಇನ್ನು ಈ ವರ್ಷ ಪಾಟಾಕಿಗಳ ಬೆಲೆ ಬಲು ದುಬಾರಿ ಈ ವರ್ಷ 100 ರಿಂದ 150% ರಷ್ಟು ಪಟಾಕಿಗಳ ಬೆಲೆ ಏರಿಕೆ ಮಾಡಲಾಗಿದೆ. ಪಾಟಾಕಿ ತಾಯಾರಿಸುವ ಕಚ್ಚವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿಗಳ ಉತ್ಪಾದನೆಯಾಗಿಲ್ಲ. ಜೊತಗೆ ಬೇರೆ ಕಡೆಯಿಂದ ಬೇಡಿಕೆಗೆ ತಕ್ಕಂತೆ ಪಟಾಕಿಗಳು ಸಿಗುತ್ತಿಲ್ಲ. ಈ ಮಧ್ಯೆ ಸರ್ಕಾರ ಹಸಿರು ಪಟಾಕಿಯನ್ನೆ ಹೊಡೆಯಬೇಕು ಅಂತ ಆದೇಶ ಮಾಡಿರುವ ಹಿನ್ನೆಲೆ ಹಸಿರು ಪಾಟಾಕಿ ತಯಾರಿಸಲು ಬೇಕಾಗುವ ಸ್ಟ್ರೋಟಿಯಂ ನೈಟ್ರೇಟ್ ಬೆಲೆ ದುಬಾರಿಯಾಗಿದೆ. ಈ ಸ್ಟ್ರೋಟಿಯಂ ನೈಟ್ರೇಟ್ ಬಳಕೆ ಮಾಡಿಯೇ ಹಸಿರು ಪಟಾಕಿ ತಾಯಾರಿಸಬೇಕು. ಹೀಗಾಗಿ ಪಟಾಕಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.