ಕೆಎನ್ಎನ್ಡಿಜಿಟಲ್ ಡೆಸ್ಕ್ : ಬ್ಯಾಂಕ್ʼಗೆ ಹೋದಾಗ ಬ್ಯಾಂಕ್ ಉದ್ಯೋಗಿಗಳು ಊಟಕ್ಕೆ ಹೋಗಿದ್ದಾರೆ ಅನ್ನೋದನ್ನ ಆನೇಕರು ಕೇಳಿರ್ತಾರೆ. ಸಮಯ ಹೋಗ್ತಿದ್ರು ಉದ್ಯೋಗಿಗಳಿಗಾಗಿ ಕಾದು ಕಾದು ಸುಸ್ತಾದವರು ಇದ್ದಾರೆ. ನಿಮ್ಗು ಅಂತಹ ಸಮಸ್ಯೆ ಎದುರಾದ್ರೆ, ನೀವು ಬ್ಯಾಂಕಿಗೆ ದೂರು ನೀಡಬೋದು.
ಊಟದ ನೆಪದಲ್ಲಿ ನಿಮ್ಮ ಕೆಲಸವನ್ನ ಮಾಡಲು ಅನುಮತಿಸದ ಈ ಉದ್ಯೋಗಿಗಳ ಬಗ್ಗೆ ಈಗ ನೀವು ದೂರು ನೀಡಬಹುದು. ಹೌದು, ಬ್ಯಾಂಕಿನ ಗ್ರಾಹಕರಿಗೆ ಅಂತಹ ಹಕ್ಕಿದೆ. ಆದ್ರೆ, ಅದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇಲ್ಲಿಗೆ ಹೋಗಿ ಅಂತಹ ಉದ್ಯೋಗಿಗಳ ಬಗ್ಗೆ ದೂರು ನೀಡಬಹುದು.
ದೂರು ನೀಡುವುದು ಹೇಗೆ?
ನೀವು ಅದರ ಬಗ್ಗೆ ಬ್ಯಾಂಕಿಂಗ್ ಒಂಬುಡ್ಸ್ಮನ್ಗೆ ದೂರು ನೀಡಬಹುದು. ಅಂದರೆ, ಬ್ಯಾಂಕ್ ಉದ್ಯೋಗಿಗಳು ನಿಮ್ಮ ಕೆಲಸವನ್ನ ಮಾಡಲು ನಿರಾಕರಿಸಿದ್ರೆ, ನೀವು ಅದರ ದೂರನ್ನ ನೇರವಾಗಿ ಬ್ಯಾಂಕಿಂಗ್ ಒಂಬುಡ್ಸ್ಮನ್ಗೆ ತೆಗೆದುಕೊಳ್ಳಬಹುದು.
ಎಲ್ಲರೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ
ಎಂದು ಆರ್ಟಿಐಗೆ ಪ್ರತಿಕ್ರಿಯಿಸಿದ ಆರ್ಬಿಐ ಬ್ಯಾಂಕ್ ಅಧಿಕಾರಿಗಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ ಎಂದು ಹೇಳಿತ್ತು. ಒಬ್ಬೊಬ್ಬರಾಗಿ ಊಟದ ವಿರಾಮವನ್ನ ತೆಗೆದುಕೊಳ್ಳಬಹುದು. ಈ ಸಮಯದಲ್ಲಿ, ಸಾಮಾನ್ಯ ವಹಿವಾಟುಗಳನ್ನ ಮುಂದುವರಿಸಬೇಕು. ಗ್ರಾಹಕರನ್ನ ಗಂಟೆಗಟ್ಟಲೆ ಕಾಯುವಂತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ.
ಶಾಖೆಯ ಕುರಿತು ಮುಖ್ಯಸ್ಥರಿಗೆ ದೂರು ನೀಡಿ
ಬ್ಯಾಂಕ್ ಉದ್ಯೋಗಿ ಕೆಲಸ ಮಾಡದಿದ್ದರೆ ನೀವು ಬ್ಯಾಂಕಿನ ಮುಖ್ಯಸ್ಥರಿಗೂ ದೂರು ನೀಡಬಹುದು. ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಪ್ರತಿಯೊಂದು ಬ್ಯಾಂಕ್ ತನ್ನದೇ ಆದ ವ್ಯವಸ್ಥೆಯನ್ನ ಹೊಂದಿದೆ. ಇದನ್ನು ಕುಂದುಕೊರತೆ ಪರಿಹಾರ ವ್ಯವಸ್ಥೆ ಎಂದು ಕರೆಯಲಾಗುತ್ತದೆ, ಇಲ್ಲಿ ಗ್ರಾಹಕರು ದೂರುಗಳನ್ನು ಸಲ್ಲಿಸಬಹುದು.
ಬ್ಯಾಂಕ್ ಸಹಾಯವಾಣಿ
ನೀವು ಬ್ಯಾಂಕಿನ ಸಹಾಯವಾಣಿ ಸಂಖ್ಯೆಗೆ ಉದ್ಯೋಗಿಯ ಬಗ್ಗೆ ದೂರು ನೀಡಬಹುದು. ನಿಮ್ಮ ದೂರು ಇಡೀ ಶಾಖೆಯ ಬಗ್ಗೆ ಇದ್ದರೂ ಸಹ ನೀವು ಇದನ್ನ ಮಾಡಬಹುದು. ಇದಕ್ಕಾಗಿ ಬ್ಯಾಂಕ್ಗಳು ದೂರವಾಣಿ ಸಂಖ್ಯೆಗಳನ್ನು ನೀಡುತ್ತವೆ. ಅನೇಕ ಬ್ಯಾಂಕುಗಳು ಆನ್ಲೈನ್ನಲ್ಲಿ ದೂರುಗಳನ್ನ ಸಲ್ಲಿಸುವ ಸೇವೆಯನ್ನ ಸಹ ಒದಗಿಸುತ್ತವೆ. ಬ್ಯಾಂಕ್ನ ವೆಬ್ಸೈಟ್ನಲ್ಲಿ ನೀವು ಈ ಸಹಾಯವಾಣಿ ಸಂಖ್ಯೆಯನ್ನು ಕಾಣಬಹುದು.