ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನೇಕ ಜನರು ವಿವಿಧ ಕಾರಣಗಳಿಗಾಗಿ ತಮ್ಮ ಬ್ಯಾಂಕ್ ಖಾತೆಯನ್ನ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಬದಲಾಯಿಸುತ್ತಾರೆ. ವಿಶೇಷವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದವರು ತಮ್ಮ ಆಯ್ಕೆಯ ಶಾಖೆಗೆ ಖಾತೆಯನ್ನ ಬದಲಾಯಿಸಲು ಬಯಸುತ್ತಾರೆ. ಆದ್ರೆ, ಇದಕ್ಕಾಗಿ ಬ್ಯಾಂಕಿಗೆ ಹೋಗಿ ಅರ್ಜಿ ನಮೂನೆ ತುಂಬುವುದೇ ದೊಡ್ಡ ಕೆಲಸವಾಗುತ್ತದೆ. ಆದ್ರೆ, ಅದರ ಹೊರತಾಗಿ ಮನೆಯಿಂದ ಹೊರಗೆ ಕಾಲಿಡದೆ ಆನ್ಲೈನ್ನಲ್ಲಿ ಈ ಕೆಲಸವನ್ನ ಮಾಡಲು ಅವಕಾಶವಿದ್ದರೆ ಒಳ್ಳೆಯದು ಅಲ್ವಾ.? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮ್ಮಂತಹವರಿಗೆ ಉತ್ತಮ ಅವಕಾಶವನ್ನ ತಂದಿದೆ. ಸರಳ ಹಂತಗಳ ಮೂಲಕ ಆನ್ಲೈನ್ ಶಾಖೆಯನ್ನ ಬದಲಾಯಿಸಬಹುದು. ಹಾಗಾದ್ರೆ, ಆ ಹಂತಗಳೇನು.?
* ಇದಕ್ಕಾಗಿ ಮೊದಲು ಎಸ್ಬಿಐ ಅಧಿಕೃತ ವೆಬ್ಸೈಟ್ ‘www.onlinesbi.com’ ಗೆ ಹೋಗಿ .
* ಅದರ ನಂತರ ‘ಪರ್ಸನಲ್ ಬ್ಯಾಂಕಿಂಗ್’ ಮೇಲೆ ಕ್ಲಿಕ್ ಮಾಡಿ ಮತ್ತು ಪಾಸ್ವರ್ಡ್ ಮತ್ತು ಯೂಸರ್ ನೇಮ್ನೊಂದಿಗೆ ಲಾಗಿನ್ ಮಾಡಿ.
* ಅದರ ನಂತರ ‘ಇ-ಸೇವೆ’ ಆಯ್ಕೆಯನ್ನು ಕ್ಲಿಕ್ ಮಾಡಿ.
* ನಂತರ ಅದರಲ್ಲಿ ‘ಟ್ರಾನ್ಸ್ಫರ್ ಆಫ್ ಸೇವಿಂಗ್ಸ್ ಅಕೌಂಟ್’ ಅನ್ನು ಕ್ಲಿಕ್ ಮಾಡಿ.
* ನೀವು ತಕ್ಷಣ ಎಸ್ಬಿಐನಲ್ಲಿ ನಿಮ್ಮ ಖಾತೆಯ ಪಟ್ಟಿಯನ್ನ ಪಡೆಯುತ್ತೀರಿ. ನೀವು ಶಾಖೆಯನ್ನು ಬದಲಾಯಿಸಲು ಬಯಸುವ ಖಾತೆಯನ್ನು ಆಯ್ಕೆಮಾಡಿ.
* ಅದರ ನಂತರ ನೀವು ಬದಲಾಯಿಸಲು ಬಯಸುವ ಶಾಖೆಯ ಹೆಸರನ್ನ ಟೈಪ್ ಮಾಡಿ ಮತ್ತು ಅದನ್ನ ಆಯ್ಕೆ ಮಾಡಬೇಕು.
* ನಂತರ ಕೊನೆಯಲ್ಲಿ ಕಾಣಿಸಿಕೊಳ್ಳುವ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ತಕ್ಷಣವೇ ಹಳೆಯ ಶಾಖೆಯ ಕೋಡ್ ಮತ್ತು ಹೊಸ ಶಾಖೆಯ ಕೋಡ್ ನಮೂದಿಸಿ ಮತ್ತು ಪರಿಶೀಲಿಸಿ.
* ಕನ್ಫರ್ಮ್ ಬಟನ್ ಒತ್ತುವುದರ ಮೂಲಕ OTP ಜನರೇಟ್ ಆಗುತ್ತದೆ. ಅದರ ನಂತರ, OTP ನಮೂದಿಸಿ ಮತ್ತು ದೃಢೀಕರಣವನ್ನು ಒತ್ತಿರಿ.
* ಕೊನೆಯಲ್ಲಿ ನಿಮ್ಮ ಬ್ಯಾಂಕ್ ಶಾಖೆಯನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ ಎಂದು ಸಂದೇಶವು ತೋರಿಸುತ್ತದೆ.
ಬಿಜೆಪಿಯವರಿಗೆ ಸಂಸ್ಕಾರ ಇಲ್ಲ , ಯಾರನ್ನು ಹೇಗೆ ಕರೆಯಬೇಕು ಗೊತ್ತಿಲ್ಲ : ಡಿ.ಕೆ ಶಿವಕುಮಾರ್ ವಾಗ್ಧಾಳಿ
‘ಭಾರತ’ವನ್ನ ಗೇಲಿ ಮಾಡಿದ ‘ಪಾಕ್ ಪ್ರಧಾನಿ’ಗೆ ಮುಟ್ಟಿ ನೋಡಿಕೊಳ್ಳೊ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ‘ಇರ್ಫಾನ್ ಪಠಾಣ್’