ಬೆಂಗಳೂರು : ಸಿ.ಟಿ ರವಿ ರೌಡಿಶೀಟರ್ ಆಗಿದ್ದು, ಹಲವು ಠಾಣೆಗಳಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ತೆಗೆಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿದ್ದು, ಸಿಟಿ ರವಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಟಿ ರವಿ ರೌಡಿಶೀಟರ್ ಆಗಿದ್ದು, ಹಲವು ಠಾಣೆಗಳಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ತೆಗೆಸಿದ್ದಾರೆ , ಹಾಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಚುನಾವಣಾ ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ, ಹಾಗಾಗಿ ಇನ್ನುಮುಂದೆ ಅವರನ್ನು ಕ್ರಿಮಿನಲ್ 420 ರವಿ ಎಂದು ಕರೆಯುತ್ತೇನೆ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.
.ಟಿ ರವಿ ಅವರ 3,000 ಕೋಟಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ, ರವಿ ಅವರ ಚರಿತ್ರೆ ಏನು, ಅಷ್ಟು ಆಸ್ತಿ ಹೇಗೆ ಬಂತು, ಅದರ ಹಿನ್ನೆಲೆ ಏನು ಎನ್ನುವುದನ್ನು ನಾವು ಹಂತ-ಹಂತವಾಗಿ ದಾಖಲೆಗಳ ಸಮೇತ ಜನರ ಮುಂದೆ ಇಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ನಾನು ಬೇಕಾದರೆ ನಿಮ್ಮ ಕಚೇರಿಗೆ ಒಬ್ಬನೇ ಬರುತ್ತೇನೆ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. ನಿಮ್ಮ ಇತಿಹಾಸವೇನು? 20 ವರ್ಷ ನೀವು ಏನಾಗಿದ್ದಿರಿ? ನಿಮ್ಮ ವಿರುದ್ಧ ಯಾವ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳಿವೆ? ಎಂಬುದು ಸೇರಿದಂತೆ ಎಲ್ಲಾ ವಿಚಾರಗಳು ಚರ್ಚೆ ಆಗಲಿ. ಇಲ್ಲದಿದ್ದರೆ ಈ ಬಗ್ಗೆ ತನಿಖೆ ಮಾಡಿಸಿ ಎಂದಿದ್ದಾರೆ.
ಪರಿಶಿಷ್ಟರ ಮೀಸಲಾತಿ ವಿಚಾರವಾಗಿ ಬಿಜೆಪಿ ಸುಳ್ಳಿನ ಪ್ರಚಾರ ಮಾಡುತ್ತಿದೆ. ಮೀಸಲಾತಿ ವಿರೋಧಿ ಬಿಜೆಪಿ, ರಮಾಜೋಯೀಸ್ ಅವರ ಮೂಲಕ ಮೀಸಲಾತಿ ವಿರುದ್ಧ ಕೇಸ್ ಹಾಕಿಸಿದ್ದನ್ನು ನಾವು ಮರೆಯಬಾರದು. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಂಚಮಸಾಲಿಗಳಿಗೂ, ಒಕ್ಕಲಿಗರಿಗೂ ಸುಳ್ಳು ಮೀಸಲಾತಿ ನೀಡುತ್ತಾರೆ ಎಂದಿದ್ದಾರೆ.
ಸಿ.ಟಿ ರವಿ ರೌಡಿಶೀಟರ್ ಆಗಿದ್ದು, ಹಲವು ಠಾಣೆಗಳಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ತೆಗೆಸಿದ್ದಾರೆ.
ಹಾಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಚುನಾವಣಾ ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ, ಹಾಗಾಗಿ ಇನ್ನುಮುಂದೆ ಅವರನ್ನು ಕ್ರಿಮಿನಲ್ 420 ರವಿ ಎಂದು ಕರೆಯುತ್ತೇನೆ.
– ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರರು pic.twitter.com/DW6ecRBW1K— Karnataka Congress (@INCKarnataka) December 14, 2022
ಕೊನೆಗೂ ಯಡಿಯೂರಪ್ಪ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ಸಕ್ಸಸ್: ನಾಳೆ ಕೊಪ್ಪಳದ ಕಾರ್ಯಕ್ರಮದಲ್ಲಿ ಭಾಗಿ
BIGG NEWS : ‘ಸಲಿಂಗ ವಿವಾಹ’ಕ್ಕೆ ಮಾನ್ಯತೆ ಕೋರಿ ‘ಸುಪ್ರೀಂಕೋರ್ಟ್’ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ