ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ಬೆಟ್ಟ ಹತ್ತಿದ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಸುಮಾರು 3800 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ನೆಲೆಸಿರೋ ಆ ದೇವಿಯನ್ನ ನೋಡಲು ಜನಸಾಗರವೇ ಹರಿದು ಬಂದಿದೆ.
ಇನ್ನೂ, ಶಾಸಕ ಸಿಟಿ ರವಿ ಕೂಡ ದೇವೀರಮ್ಮ ಬೆಟ್ಟ ಹತ್ತಿದ್ದು, ರಾಷ್ಟ್ರದ ಜನತೆಯ ಒಳಿತಿಗಾಗಿ ದೇವೀರಮ್ಮನಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಸಿ.ಟಿ ರವಿ ಹೇಳಿದರು. ಹಾಗೂ ಮುಂದಿನ ದಿನಗಳಲ್ಲಿ ದೇಶಕ್ಕೆ ಬರುವ ಎಲ್ಲಾ ಆಪತ್ತುಗಳನ್ನು ನಿವಾರಣೆ ಮಾಡುವಂತೆ ಆ ದೇವಿಯ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದು ಸಿ.ಟಿ ರವಿ ಹೇಳಿದರು. ಭಕ್ತರು ಉಪವಾಸ ಇದ್ದು, ದೇವಿಗೆ ಆರತಿ ಮಾಡಿದ ನಂತರ ಉಪವಾಸ ತ್ಯಜೀಸುವ ಮತ್ತು ಹರಕೆ ಕಟ್ಟಿ ಬೆಟ್ಟ ಹತ್ತುವ ಪ್ರತೀತಿ ಬಹಳ ವರ್ಷಗಳಿಂದ ಇದೆ , ಅಂತೆಯೇ ಬಹಳ ವರ್ಷಗಳಿಂದ ಬೆಟ್ಟ ಹತ್ತುತ್ತಿದ್ದೇನೆ ಎಂದರು.
ರಾಜ್ಯದ ನಾನಾ ಮೂಲೆಗಳಿಂದ ಬಂದ ಭಕ್ತರು ನಿನ್ನೆಯಿಂದ ಕಲ್ಲು ಮುಳ್ಳು ಲೆಕ್ಕಿಸದೇ ಬೆಟ್ಟವನ್ನೇರಿ ಇಂದು ದೇವಿ ದರ್ಶನ ಪಡೆದಿದ್ದಾರೆ. ಚಪ್ಪಲಿ ಇಲ್ಲದೇ ಒಂದೂವರೇ ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿ ದರ್ಶನ ಪಡೆದಿದ್ದಾರೆ . ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಬಿಂಡಿಗಾ ದೇವಿರಮ್ಮಗೆ ಉಘೇ ಎಂದು ಕೈಮುಗಿದರು..
ದೀಪಾವಳಿ ಅಮವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರೋ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರ್ತಾರೆ. ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ ಎಂಬ ನಂಬಿಕೆಯಿದೆ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬರುತ್ತಾರೆ.