ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದ ವೀಡಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಆ ಕ್ರೂರಿಗಳು ಮಾನವೀಯತೆಯ ಎಲ್ಲಾ ಮಿತಿಗಳನ್ನ ದಾಟುತ್ತಿರುವುದನ್ನ ಕಾಣಬಹುದು. ಈ ಎರಡು ನಿಮಿಷಗಳ ವೀಡಿಯೊದಲ್ಲಿ, ಒಬ್ಬ ಮಹಿಳೆಯನ್ನ ಜನರ ನಡುವೆ ಹೇಗೆ ಹೊಡೆಯಲಾಗುತ್ತಿದೆ ಅನ್ನೋದನ್ನ ನೋಡಬಹುದು. ಈ ನೋವಿನ ವೀಡಿಯೊವನ್ನ ಶಬ್ನಮ್ ನಸೀಮಿ ಎಂಬ ಮಹಿಳೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ತಾಲಿಬಾನ್ ಆಡಳಿತ ನಿಯಮವನ್ನ ಮುರಿದಿದ್ದಕ್ಕಾಗಿ ಮಹಿಳೆಯನ್ನ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಿಯಮದ ಅಡಿಯಲ್ಲಿ, ಪುರುಷ ಸಂಗಾತಿಯಿಲ್ಲದೇ ಯಾವುದೇ ಮಹಿಳೆ ಅಂಗಡಿಯಲ್ಲಿ ಶಾಪಿಂಗ್ ಮಾಡಲು ಹೋಗುವಂತಿಲ್ಲ. ಹಾಗೆ ಮಾಡುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ.
ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ಶಬ್ನಮ್ ನಾಸಿಮಿ, “ಅಫ್ಘಾನಿಸ್ತಾನದ ಮಹಿಳೆಯರು ತಾಲಿಬಾನ್ ಆಡಳಿತದಲ್ಲಿ ಭೂಮಿಯ ಮೇಲೆಯೇ ನರಕವನ್ನ ಅನುಭವಿಸುತ್ತಿದ್ದಾರೆ” ಎಂದಿದ್ದಾರೆ.
ಅಂದ್ಹಾಗೆ, ಕಳೆದ ಬುಧವಾರ ಅಫ್ಘಾನಿಸ್ತಾನದ ನ್ಯಾಯಾಲಯದ ಆದೇಶದ ಮೇರೆಗೆ ಮೂವರು ಮಹಿಳೆಯರು ಮತ್ತು 11 ಪುರುಷರು ಕಳ್ಳತನ ಮತ್ತು ನೈತಿಕ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಅವರನ್ನ ಕೊಲ್ಲಲಾಗಿದೆ ಎಂದು ವರದಿ ಮಾಡಿದೆ.
JOB ALERT : ‘ಪದವಿ’ ಪಾಸಾದವರಿಗೆ ಬಂಪರ್ ಸುದ್ದಿ : ನವಮಂಗಳೂರು ಬಂದರಿನಲ್ಲಿ ಉದ್ಯೋಗವಕಾಶ
Viral Video : ಬಾಯಲ್ಲಿ ‘ಹುಕ್ಕಾ’ ಹಿಡಿದು ವೇದಿಕೆಯಲ್ಲೇ ಈ ಕೆಲಸ ಮಾಡಿದ ವಧು-ವರರು, ಅತಿಥಿಗಳಿಗೆ ಶಾಕ್.!