ತಮಿಳುನಾಡು : ಮನುಷ್ಯರಲ್ಲಿ ಇನ್ನೂ ಮಾನವೀಯತೆ, ಕರುಣೆ ಇದೆ ಎನ್ನುವುದಕ್ಕೆ ಈ ಒಂದು ಘಟನೆ ಪ್ರಮುಖ ಸಾಕ್ಷಿಯಾಗಿದೆ. ಕೆಲವೊಂದು ಬಾರಿ ಗೊತ್ತಿಲ್ಲದೆ ಸಮಯ ಪ್ರಜ್ಞೆಯಿಂದ ಕೆಲವರು ಮತ್ತೊಬ್ಬರ ಜೀವ ಉಳಿಸಿರುತ್ತಾರೆ. ಇದೀಗ ಇಂತಹ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೆ ಕುಳಿತಿದ್ದ ಕಾಗೆ ಒಂದು ಕರೆಂಟ್ ಶಾಕ್ ನಿಂದ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿತ್ತು. ಈ ವೇಳೆ ತಕ್ಷಣ ಅಲ್ಲಿಯೇ ಇದ್ದಂತಹ ಅಗ್ನಿಶಾಮಕ ದಳದ ಸಿಬ್ಬಂದಿ ಒಬ್ಬರು ಕಾಗೆಗೆ ಸಿಪಿಆರ್ ಮೂಲಕ ಮರು ಜೀವ ನೀಡಿ ಮಾನವೀಯತೆ ಮೆರೆದಿದ್ದಾರೆ.
ಹೌದು ಈ ಒಂದು ಘಟನೆ ತಮಿಳುನಾಡಿನಲ್ಲಿ ನಡೆದಿದ್ದು,ಕೊಯಮತ್ತೂರಿನ ಕವುಂಡಂಪಾಳ್ಯದಲ್ಲಿ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯೋರ್ವ ತಮ್ಮ ಸಮಯ ಪ್ರಜ್ಞೆಯಿಂದ ಕರೆಂಟ್ ಶಾಕ್ ಹೊಡೆದು ಕುಸಿದು ಬಿದ್ದ ಕಾಗೆಯ ಪ್ರಾಣವನ್ನು ರಕ್ಷಿಸಿದ್ದಾರೆ. ಕರೆಂಟ್ ಶಾಕ್ ಹೊಡೆದ ಪರಿಣಾಮ ಕಾಗೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಪ್ರಾಣ ಉಳಿಸಿಕೊಳ್ಳಲು ನರಳಾಡುತ್ತಿತ್ತು, ಆ ಸಂದರ್ಭದಲ್ಲಿ ಕಾಗೆಯನ್ನು ಎತ್ತಿಕೊಂಡು ಅದರ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಸಿಪಿಆರ್ ಮಾಡುವ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾಗೆಯನ್ನು ಸಾವಿನ ದವಡೆಯಿಂದ ರಕ್ಷಿಸಿ, ಅದಕ್ಕೆ ಮರು ಜೀವನವನ್ನೇ ನೀಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕಾಗೆಯ ಜೀವ ಉಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ X ನಲ್ಲಿ ಭಾರಿ ವೈರಲ್ ಆಗಿದ್ದು, ಕರೆಂಟ್ ಶಾಕ್ ತಗುಲಿ ಕುಸಿದು ಬಿದ್ದ ಕಾಗೆಯ ಪ್ರಾಣ ಉಳಿಸಿದ್ದಾರೆ. ಕುಸಿದು ಬಿದ್ದ ಕಾಗೆಯ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಸಿಪಿಆರ್ ಮಾಡುವ ಮೂಲಕ ಮುಗ್ಧ ಜೀವದ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಇವರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
கோவை கவுண்டம்பாளையத்தில் மின்சாரம் பாய்ந்து கீழே விழுந்த காகத்தை, அங்கிருந்த தீயணைப்பு வீரர் வெள்ளத்துரை என்பவர் சிபிஆர் செய்து காப்பாற்றினார்.#TheInfoCoimbatore | #coimbatore | #CPR | #Crows | #FireServiceMan pic.twitter.com/ngSufBKjNI
— the info coimbatore (@InfoCoimbatore) September 19, 2024