ನ್ಯೂಯಾರ್ಕ್ : ಜೂಲಿಯೊ ಒಟೆರೊ ಫೆರ್ನಾಂಡಿಸ್ ಎಂಬ ಕೋಸ್ಟರಿಕನ್ ಶಾಲಾ ಬಾಲಕ ತನ್ನ ಪೋಷಕರೊಂದಿಗೆ ಮಟಿನಾ ನದಿಗೆ ಭೇಟಿ ನೀಡಿದ್ದಾಗ, ಮೊಸಳೆ ಬಾಲಕನನ್ನು ಎಳೆದೊಯ್ದು ತಿಂದು ಹಾಕಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 30 ರಂದು ಮೀನುಗಾರಿಕೆ ಪ್ರವಾಸದ ವೇಳೆ 8 ವರ್ಷದ ಜೂಲಿಯೊ ತನ್ನ ಹೆತ್ತವರು, ನಾಲ್ವರು ಒಡಹುಟ್ಟಿದವರು ಮತ್ತು ಇತರ ಸಂಬಂಧಿಕರೊಂದಿಗೆ ಸಮಯ ಕಳೆಯುತ್ತಿದ್ದ. ಈ ವೇಳೆ ಬಾಲಕ ನದಿಯ ನೀರಿನಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಂದ ಮೊಸಳೆ ಅವನನ್ನು ಎಳೆದೊಯ್ದು ತಿಂದು ಹಾಕಿದೆ.
ಈ ನೋವಿನ ಘಟನೆಯ ಬಗ್ಗೆ ಮಾತನಾಡಿದ ಬಾಲಕನ ತಂದೆ ಒಟೆರೊ ʻನಮ್ಮ ಕಣ್ಣ ಮುಂದೆಯೇ ನನ್ನ ಮಗನನ್ನು ಮೊಸಳೆ ನೀರಿನೊಳಗೆ ಎಳದೊಯ್ದು ತಿಂದು ಹಾಕಿತುʼ ಎಂದು ದುಃಖಿತರಾದರು.
ಇನ್ನೂ ಇದಾದ ಒಂದು ತಿಂಗಳ ನಂತ್ರ, ಅಪರಿಚಿತ ಬೇಟೆಗಾರನು ಆ ಪ್ರದೇಶದಲ್ಲಿ ಮೊಸಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ಸ್ಥಳೀಯರು ಮೊಸಳೆಯ ಹೊಟ್ಟೆಯನ್ನು ಪರಿಶೀಲಿಸಿದಾಗ, ಅವರು ಜೂಲಿಯೊಗೆ ಸೇರಿದ್ದೆಂದು ನಂಬಲಾದ ಕೂದಲಿನ ಎಳೆಗಳು ಪತ್ತೆಯಾಗಿವೆ ಎಂದಿದ್ದಾರೆ.
BREAKING NEWS : ಶಾರೀಖ್ ಕುಕ್ಕರ್ ಹಿಡಿದು ನಿಂತ ಫೋಟೋಗೆ ಟ್ವಿಸ್ಟ್ : ಮಂಗಳೂರು ಸ್ಪೋಟಕ್ಕೆ ಮತ್ತೋರ್ವ ಸಾಥ್..?
BIGG NEWS : ದೆಹಲಿ ಅಬಕಾರಿ ನೀತಿ ಪ್ರಕರಣ: ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಅರೆಸ್ಟ್
BREAKING NEWS : ಶಾರೀಖ್ ಕುಕ್ಕರ್ ಹಿಡಿದು ನಿಂತ ಫೋಟೋಗೆ ಟ್ವಿಸ್ಟ್ : ಮಂಗಳೂರು ಸ್ಪೋಟಕ್ಕೆ ಮತ್ತೋರ್ವ ಸಾಥ್..?