ಉತ್ತರಕನ್ನಡ : ಬಿಜೆಪಿ ನಾಯಕರನ್ನು ಹೊಗಳಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ವ್ಯಂಗ್ಯವಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆ ನೀಡಿದ್ದು ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ಹೊಗಳಿದ್ದಾರೆ.
ವಿ ಸೋಮಣ್ಣ ಅವರು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಯಾಣದ ಫಲವಾಗಿ ರೈಲು ಸೇವೆ ಪೂನ ಆರಂಭವಾಗಿದೆ. ದಾಂಡೇಲಿ ಮತ್ತು ಅಳ್ಳಾವರ ರೈಲು ಸಂಚಾರ ಪುನರಾರಂಭ ಆಗಿದೆ. ವಿ ಸೋಮಣ್ಣ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದಾರೆ ಯಾವ ಭಾಷೆ ನೋಡಿದರೂ ಫುಲ್ ಆಗಿರುತ್ತವೆ ಗಂಡು ಮಕ್ಕಳಿಗೆ 10ವುದಕ್ಕೂ ಸಹ ಆಗಲ್ಲ ಬಸ್ನಲ್ಲಿ ಯಾರಿಗಾದರೂ ಹಣ ಬೀಳುತ್ತದೆ ಬಸ್ನಲ್ಲಿ ಗಂಡು ಮಕ್ಕಳು ನೋಡಿಕೊಂಡು ಓಡಾಡಬೇಕಿದೆ ಸಿದ್ದರಾಮಯ್ಯ ಮಾಡಿದ್ದು ಒಂದೆರಡು ಅಲ್ಲ ಎಂದು ಆರ್ ವಿ ದೇಶಪಾಂಡೆ ಗ್ಯಾರಂಟಿ ಕುರಿತು ವ್ಯಂಗ್ಯವಾಡಿದ್ದಾರೆ.








