ಬೆಂಗಳೂರು: ರಾಜ್ಯ ಸರ್ಕಾರದಿಂದ ಖಾಸಗಿ ವಲಯದಲ್ಲಿಯೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನಿರ್ಧಾರವನ್ನು ಪೋನ್ ಪೇ ಸಿಇಒ ಟೀಕಿಸಿದ್ದರು. ಅವರ ಟೀಕೆಯ ವಿರುದ್ಧ ಸಿಡಿದೆದ್ದಿರುವಂತ ಕನ್ನಡಿಗರು ಎಕ್ಸ್ ನಲ್ಲಿ #BoycottPhonePe #UninstallPhonePe ಅಭಿಯಾನವನ್ನೇ ಆರಂಭಿಸಿದ್ದಾರೆ. ಈಗ ಈ ಅಭಿಯಾನವನ್ನು ಎಕ್ಸ್ ನಲ್ಲಿ ಭಾರೀ ಟ್ರೆಂಡ್ ಕೂಡ ಆಗಿದೆ.
ಕನ್ನಡಿಗರಿಗೆ ಖಾಸಗಿ ವಲಯದಲ್ಲೂ ಶೇ.100ರಷ್ಟು ಉದ್ಯೋಗ ಮೀಸಲಾತಿ ಸಂಬಂಧದ ಸರ್ಕಾರದ ನಿರ್ಧಾರದ ಬಗ್ಗೆ ಪೋನ್ ಪೇ ಸಿಇಒ ಸಮೀರ್ ನಿಗಮ್ ಟೀಕಿಸಿದ್ದರು. ಅವರ ಟೀಕೆಗೆ ಕನ್ನಡಿಗರು ವ್ಯಾಪಕ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಕರ್ನಾಟಕದ ಕನ್ನಡಿಗರ ವಿರುದ್ಧ ಮಾತನಾಡಿದಂತ ಪೋನ್ ಪೇ ಸಿಇಒ ಸಮೀರ್ ನಿಗಮ್ ಗೆ ಬುದ್ದಿ ಕಲಿಸಬೇಕು ಅಂತ ಕನ್ನಡಿಗರು ನಿರ್ಧರಿಸಿದ್ದಾರೆ. ಅಲ್ಲದೇ ಪೋನ್ ಪೇ ಗೆ 1 ರೇಟಿಂಗ್ ನೀಡಿ, ಮೊಬೈಲ್ ನಿಂದ ಆಪ್ ಡಿಲೀಟ್ ಮಾಡಿ ಅನ್ನೋ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈಗ ವೈರಲ್ ಆಗಿದೆ.
I always preferred @PhonePe over any other UPI apps due to its Swadeshi origin. @_sameernigam, Karnataka helped you to grow up. You came here to build your career, not to improve Bengaluru. This is the time to say goodbye to PhonePe. #UninstallPhonePe #BoycottPhonePe pic.twitter.com/hwx0Ccv1gl
— Md iliyas (@mdiliyas77) July 19, 2024
PhonePay#Boycott PhonePe#KarnatakaJobsForKannadigas
PhonePayಅನ್ನು ರಿಪೋರ್ಟ್ ಮತ್ತು Uninstall ಮಾಡುವುದರ ಮೂಲಕ ಬಿಸಿ ಮುಟ್ಟಿಸಿ pic.twitter.com/oPM8O8MnZ1
— ಕನ್ನಡಿಗ ದೇವರಾಜ್ (@sgowda79) July 19, 2024
ಸೋಷಿಯಲ್ ಮೀಡಿಯಾದಲ್ಲಿ ಅನೇಕ ಕನ್ನಡಿಗರು ಪೋನ್ ಪೇಗೆ 1 ರೇಟಿಂಗ್ ನೀಡಿ, ತಮ್ಮ ಮೊಬೈಲ್ ನಿಂದ ಅನ್ ಇನ್ಸ್ ಸ್ಟಾಲ್ ಮಾಡುವಂತ ಪೋಟೋ, ವೀಡಿಯೋಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಈಗ ಟ್ರೆಂಡ್ ಕೂಡ ಆಗಿದೆ.
#UninstallPhonePe
This should be a lesson!#KarnatakaJobsForKannadigas pic.twitter.com/RJ5ofVjUva— ಕನ್ನಡ ಡೈನಾಸ್ಟಿ (@appudynasty1) July 19, 2024
ಮೊದಲು ಫೋನ್ ಪೇ ಅಪ್ಲಿಕೇಷನ್ ಅಲ್ಲಿ ಅಕೌಂಟ್ ಡಿ ಆಕ್ಟಿವೇಟ್ ಮಾಡಿ ಆಮೇಲೆ ಪ್ಲೇ ಸ್ಟೋರ್ ಅಲ್ಲಿ 1* ರೇಟಿಂಗ್ ಕೊಟ್ಟು ಅನ್ ಇನ್ಸ್ಟಾಲ್ ಮಾಡಿ#BoycottPhonePe #uninstallphonepe #KarnatakaJobsForKannadigas pic.twitter.com/nOVkPVIkLd
— ಮನು ಸಿಆರ್ | Manu CR (@ManuChakkaluru) July 19, 2024
ಪೋನ್ ಪೇ ಸಿಇಓ ಸಮೀರ್ ನಿಗಮ್ ಹೇಳಿದ್ದೇನು?
ರಾಜ್ಯ ಸರ್ಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ನೀಡುವ ಬಗ್ಗೆ ಹೇಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಸಮೀರ್, ‘ನನಗೆ ಈಗ 46 ವರ್ಷ. 15 ವರ್ಷಕ್ಕಿಂತ ಹೆಚ್ಚು ಕಾಲ ಯಾವ ರಾಜ್ಯಗಳಲ್ಲಿಯೂ ಉಳಿದಿಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ನಿಯೋಜನೆ ಮಾಡುತ್ತಿದ್ದರು. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?. ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ, ದೇಶದಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?’ ಎಂದು ಅವರು ಪ್ರಶ್ನಿಸಿದ್ದರು. ಇದೀಗ ಅವರ ಈ ಟೀಕೆಗೆ ಕನ್ನಡಿಗರು ಅವರ ವಿರುದ್ಧ ಸಿಡಿದೆದ್ದು, ಪೋನ್ ಪೇ ಬಳಕೆಯನ್ನು ಬಾಯ್ ಕಾಟ್ ಮಾಡುತ್ತಿದ್ದಾರೆ.
I am 46 years old. Never lived in a state for 15+ yrs
My father worked in the Indian Navy. Got posted all over the country. His kids don't deserve jobs in Karnataka?
I build companies. Have created 25000+ jobs across India! My kids dont deserve jobs in their home city?
Shame.
— Sameer.Nigam (@_sameernigam) July 17, 2024
ವಾಲ್ಮೀಕಿ ನಿಗಮದ ಹಗರಣ: ಹಣ ಎಟಿಎಂ ಮೂಲಕ ಕಾಂಗ್ರೆಸ್ ನಾಯಕರಿಗೆ ಹೋಗಿದೆಯೇ?: ಆರ್ ಅಶೋಕ್ ಪ್ರಶ್ನೆ
ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ