ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಮಸೀದಿ ಮುಂಭಾಗ ಕೇಸರಿ ಬಾವುಟ ತೆರವು ವೇಳೆ ಶ್ರೀರಾಮ ಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ.
BIGG NEWS : ಕೋಳಿ ಸಾಕಾಣಿಕೆದಾರರಿಗೆ ಗುಡ್ ನ್ಯೂಸ್ : ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗೆ ಅವಕಾಶ
ದತ್ತಮಾಲಾ ಅಭಿಯಾನ ಹಿನ್ನೆಲೆ ಶ್ರೀರಾಮ ಸೇನೆ ಕಾರ್ಯಕರ್ತರು ಬಾವುಟ ಕಟ್ಟಿದ್ದರು. ಆದ್ರೆ ಪೊಲೀಸರು ಮಸೀದಿ ಮುಂಭಾಗದ ಬಾವುಟಗಳನ್ನ ತೆರವುಗೊಳಿಸಿದ್ದರು. ಈ ವಿಚಾರವಾಗಿ ಅರ್ಜುನ್ ಮತ್ತು ರಫೀಕ್ ನಡುವೆ ಮಾತಿನ ಚಕಮಕಿಯಾಗಿ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ. ಹಲ್ಲೆ, ಜೀವ ಬೆದರಿಕೆ ಎಂದು ಅರ್ಜುನ್ ದೂರು ದಾಖಲಿಸಿದ್ದಾರೆ. ಇನ್ನು ಗಲಾಟೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು ಇಬ್ಬರೂ ಶೃಂಗೇರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕು ಆಸ್ಪತ್ರೆಗೆ ಎಎಸ್ಪಿ ಗುಂಜನ್ ಆರ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.