ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ನಿಷೇಧಿತ ಜಮಾತ್-ಎ-ಇಸ್ಲಾಮಿ ಇಸ್ಲಾಮಿ ಸಂಘಟನೆಗೆ ಸೇರಿದ ಸುಮಾರು 90 ಕೋಟಿ ಮೌಲ್ಯದ 11 ಪ್ರಮುಖ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಡ್ನಿ ಕಸಿಗಾಗಿ ಸಿಂಗಾಪುರಕ್ಕೆ ತೆರಳಿದ ಲಾಲು ಪ್ರಸಾದ್ ಯಾದವ್ ; ವಿಡಿಯೋ ಹಂಚಿಕೊಂಡ ಲಾಲು ಪುತ್ರಿ ರೋಹಿಣಿ
ಈ ಕಾರ್ಯಾಚರಣೆಯು ಆಮೂಲಾಗ್ರತೆ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ರಾಜ್ಯ ತನಿಖಾ ಸಂಸ್ಥೆ (SIA) ಜಮ್ಮು ಮತ್ತು ಕಾಶ್ಮೀರದಾದ್ಯಂತ ಜಮಾತ್ ಸುಮಾರು 200 ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.
ಈ ತಿಂಗಳ ಆರಂಭದಲ್ಲಿ, ಶೋಪಿಯಾನ್ ಜಿಲ್ಲೆಯಲ್ಲಿ ಸಂಘಟನೆಗೆ ಸೇರಿದ ಒಂಬತ್ತು ಆಸ್ತಿಗಳನ್ನು ಎಸ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರಲ್ಲಿ ಎರಡು ಶಾಲಾ ಕಟ್ಟಡಗಳು ಕೂಡ ಸೇರಿಕೊಂಡಿವೆ.
ಅನಂತನಾಗ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ನಿಂದ ಆದೇಶವನ್ನು ಪಡೆದ ನಂತರ ಎಸ್ಐಎ ಅಧಿಕಾರಿಗಳು ಭಾರೀ ಪೊಲೀಸ್ ತುಕಡಿಗಳೊಂದಿಗೆ 11 ಆಸ್ತಿಗಳ ಮೇಲೆ ದಾಳಿ ನಡೆಸಿ ಔಪಚಾರಿಕವಾಗಿ ವಶಪಡಿಸಿಕೊಂಡ ಬಳಿಕ ಅನಂತನಾಗ್ನ ಹಲವು ಸ್ಥಳಗಳಲ್ಲಿ ಶನಿವಾರ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಜೆನ್ಸಿಯು ಅಧಿಸೂಚಿತ ಆಸ್ತಿಯಲ್ಲಿ ಪ್ರವೇಶ ಮತ್ತು ಬಳಕೆಯನ್ನು ನಿರ್ಬಂಧಿಸುವ ಬ್ಯಾನರ್ಗಳನ್ನು ಹಾಕಿದೆ.
ಜಮಾತ್-ಎ-ಇಸ್ಲಾಮಿ ಜಮ್ಮು ಮತ್ತು ಕಾಶ್ಮೀರದ ಅತಿದೊಡ್ಡ ರಾಜಕೀಯ-ಧಾರ್ಮಿಕ ಸಂಸ್ಥೆಯಾಗಿದೆ. ಇದು 2019 ರಲ್ಲಿ ನಿಷೇಧಿಸುವ ಮೊದಲು ಶಾಲೆಗಳು ಮತ್ತು ಇತರ ಸಾಮಾಜಿಕ ಮೂಲಸೌಕರ್ಯಗಳ ಬೃಹತ್ ಜಾಲವನ್ನು ಹೊಂದಿತ್ತು.
BREAKING NEWS : ಕಾಂಗ್ರೆಸ್ `SC-ST’ ಐಕ್ಯತಾ ಸಮಾವೇಶಕ್ಕೆ ಮುಹೂರ್ತ ಫಿಕ್ಸ್