ರಾಮನಗರ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ರಾಜಕೀಯ ಕಸರತ್ತುಗಳು ಆರಂಭವಾಗಿದೆ.
ಇದೀಗ ಆಪರೇಷನ್ ಕಮಲದ ಕುರಿತು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಹಲವು ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಎರಡೂ ಪಕ್ಷದದಿಂದ ಮುಖಂಡರು ಬರಲಿದ್ದಾರೆ, ನಾವು ಹೇಳೋದಕ್ಕಿಂತ ಮಾಡಿ ತೋರಿಸುತ್ತೀವಿ, ಕಾದು ನೋಡಿ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ಶಿವಮೊಗ್ಗಕ್ಕೆ ನಾಳೆ RSS ಮುಖ್ಯಸ್ಥ ‘ಮೋಹನ್ ಭಾಗವತ್’ ಆಗಮನ : ಪೊಲೀಸ್ ಇಲಾಖೆ ಅಲರ್ಟ್