ಬೆಂಗಳೂರು: ಪ್ರಾಣಿಗಳಿಗೆ ಈ ಥರ ಮಾಡಿದವನು ಮನುಷ್ಯನೇ ಅಲ್ಲ. ಏನೇ ದ್ವೇಷವಿದ್ದರೂ, ಗಲಾಟೆ ಇದ್ದರೂ ಹೀಗೆ ಮಾಡಬಾರದು. ನಾನೇ ಮೂರು ಹಸುಗಳನ್ನು ಕೊಡಿಸುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಭರವಸೆಯನ್ನು ನೀಡಿದರು.
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ಘಟನೆ ವಿಷಯ ತಿಳಿದಾಗ ನಾನು ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಇದ್ದೆವು. ಕೂಡಲೇ ಸಿಎಂ ಕಮೀಷನರ್ ಗೆ ಕರೆ ಮಾಡಿ, ಈ ಕೆಲಸ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಸೂಚಿಸಿದ್ದಾರೆ ಎಂದರು.
ನಾನು ಕೂಡ ಪೋಲಿಸರಿಗೆ ಇಂತಹ ಕೆಲಸ ಮಾಡಿದಂತ ದುಷ್ಕರ್ಮಿಗಳನ್ನು ಬಂಧಿಸೋದಕ್ಕೆ ಹೇಳಿದ್ದೇನೆ. ಯಾರೇ ಆದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ನಾನೇ ಮೂರು ಹೊಸ ಹಸುಗಳನ್ನು ಕೊಡಿಸುತ್ತೇನೆ. ಅವರ ಕುಟುಂಬದ ಜೊತೆಗೆ ನಾನಿದ್ದೇನೆ. ಯಾವುದೇ ಭಯಬೇಡ. ಆತಂಕ ಬೇಡ ಎಂಬುದಾಗಿ ಹಸುವಿನ ಮಾಲೀಕರಿಗೆ ಸಚಿವ ಜಮೀರ್ ಅಹ್ಮದ್ ಧೈರ್ಯ ತುಂಬಿ ಭರವಸೆ ನೀಡಿದರು.
ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ HDK ಆಗ್ರಹ
SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!