ನವದೆಹಲಿ: ವಿದೇಶಗಳಲ್ಲಿ ಕೊರೋನ ಹೆಚ್ಚಾಗುತ್ತಿದೆ. ಹೀಗಾಗಿ ದೇಶದ ಜನರು ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಾ, ಆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಷದ ಕೊನೆಯ ಮನ್ ಕೀ ಬಾತ್ ನಲ್ಲಿ ಕಿವಿಮಾತು ಹೇಳಿದ್ದಾರೆ.
ನಿನ್ನೆ ಪ್ರಧಾನಿ ಮೋದಿಯವರು ಮನ್ ಕೀ ಬಾತ್ ನಲ್ಲಿ ಮಾತನಾಡಿ, ವರ್ಷದ ಕೊನೆಯ ಹಾಗೂ ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ಅನೇಕರು ರಜೆಯ ಮೂಡ್ ನಲ್ಲಿ ಇದ್ದಾರೆ. ಆದ್ರೇ ಈ ಸಂದರ್ಭದಲ್ಲಿಯೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ವಲ್ಪ ಜಾಗರೂಕತೆಯಿಂದ ಈ ಸಂದರ್ಭದಲ್ಲಿ ಎಚ್ಚರಿಕೆಯ ನಡೆಯನ್ನು ತೋರಬೇಕು ಎಂದಿದ್ದಾರೆ.
ಅನೇಕ ದೇಶಗಳಲ್ಲಿ ಕೊರೋನಾ ಹೆಚ್ಚುತ್ತಿದೆ ಎಂದು ನೀವು ನೋಡುತ್ತಿದ್ದೀರಿ. ಆದ್ದರಿಂದ ನಾವು ಮಾಸ್ಕ್ ಧರಿಸಬೇಕು ಮತ್ತು ಕೈ ತೊಳೆಯುವಂತ ಸ್ವಚ್ಛತೆಯ ನಿಯಮಗಳನ್ನು ಪಾಲಿಸಬೇಕು. ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕಿವಿಮಾತು ಹೇಳಿದರು.
ಶೂನ್ಯ ಡಿಗ್ರಿಯತ್ತ ಸಾಗಿದ ಉತ್ತರ ಭಾರತ ತಾಪಮಾನ: ಚಳಿಯಿಂದ ಜನತೆ ಗಡಗಡ | Winter Session