Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫಾಹಲ್ಗಾಮ್ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕರಾಳ ಹಸ್ತ: ‘ಗೋಪ್ರೋ’ ಕ್ಯಾಮೆರಾ ಮತ್ತು 2024 ರ ದಾಳಿಯ ಲಿಂಕ್ ಬಿಚ್ಚಿಟ್ಟ ಎನ್‌ಐಎ!

JOB ALERT : ರೈಲ್ವೇ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

BIG NEWS : ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸೇವೆ ಇನ್ನಷ್ಟು ಚುರುಕು: ಕಂದಾಯ ಇಲಾಖೆಯಿಂದ ಹೊಸ ನಿಯಮ ಜಾರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೊವೀಡ್ ಭ್ರಷ್ಟಾಚಾರ: ಕುನ್ಹಾ ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ ರಚನೆ- ಸಚಿವ ಹೆಚ್.ಕೆ ಪಾಟೀಲ್
KARNATAKA

ಕೊವೀಡ್ ಭ್ರಷ್ಟಾಚಾರ: ಕುನ್ಹಾ ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ ರಚನೆ- ಸಚಿವ ಹೆಚ್.ಕೆ ಪಾಟೀಲ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ವೈದ್ಯಕೀಯ ಪರಿಕರಗಳ ಖರೀದಿ, ವಿತರಣೆ ಮತ್ತು ಬಳಕೆ ವಿಷಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ನ್ಯಾಯಾಂಗ ಆಯೋಗ ಒಂದು ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ವಿಶ್ಲೇಷಿಸಿ ಅಧ್ಯಯನ ಮಾಡಿ ಮುಂದಿನ ಕ್ರಮಗಳ ಬಗ್ಗೆ ಅಗತ್ಯದ ಶಿಫಾರಸ್ಸುಗಳನ್ನು ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಅವರನ್ನೊಳಗೊಂಡ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ಇಂದಿಲ್ಲಿ ಪ್ರಕಟಿಸಿದರು.

ಸಚಿವ ಸಂಪುಟದ ನಿರ್ಣುಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಅವರು ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ನ್ಯಾಯಾಂಗ ಆಯೋಗ ವರದಿ ಸಲ್ಲಿಸಿದೆ ಎಂದು ತಿಳಿಸಿದರು.

ತಾವು ಮತ್ತು ಶ್ರೀ ರಾಮಲಿಂಗಾ ರೆಡ್ಡಿಯವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೋವಿಡ್ ಭ್ರಷ್ಟಾಚಾರದ ಕುರಿತು ವಿವರವಾದ ವರದಿಯನ್ನು ವಿಧಾನ ಮಂಡಲಕ್ಕೆ ಸಲ್ಲಿಸಲಾಗಿತ್ತು. ಆದರೆ ಬಿ.ಜೆ.ಪಿ. ಆಡಳಿತಾವಧಿಯಲ್ಲಿ ಅಂದಿನ ಸಭಾಧ್ಯಕ್ಷರು ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲಿಲ್ಲ ಎಂದು ಪತ್ರಕರ್ತರ ಉತ್ತರವಾಗಿ ತಿಳಿಸಿದರು.

ಕೋವಿಡ್ ಪರಿಕರಗಳ ಖರೀದಿಯಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿತ್ತು. ಈ ವರದಿಯ ನಂತರ  ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಧಾರದ ಮೇಲೆ ನ್ಯಾಯಾಂಗ ಆಯೋಗ ರಚನೆಯಾಗಿತ್ತು. ಈ ಆಯೋಗ 7 ಸಂಪುಟದಲ್ಲಿ ವರದಿ ಸಲ್ಲಿಸಿದೆ. ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರ, ಸರ್ಕಾರಿ ಕಡತಗಳ ಕಾಣೆಯಾಗುವಿಕೆ ಬಹು ಪ್ರಮುಖವಾದ ಅಂಶವಾಗಿದೆ ಎಂದು ಸಚಿವರು ವಿವರಿಸಿದರು.

ಮುಡಾ ಹಗರಣದ ನಂತರ ಕೋವಿಡ್ ಭ್ರಷ್ಟಾಚಾರವನ್ನು ಪ್ರಸ್ತಾಪಿಸುತತಿರುವುದು ಪ್ರತಿಕಾರದ ಕ್ರಮವಲ್ಲವೇ ಎಂದು  ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಡಾ ಎಂಬ ಹೆಸರಿನ ಹಗರಣವಲ್ಲದಿದ್ದರೂ ಪ್ರಸ್ತಾಪವಾಗಿ ಕೇವಲ ಎರಡು ತಿಂಗಳು ಗತಿಸಿದೆ. ಆದರೆ ಕೊವೀಡ್ ಭ್ರಷ್ಟಾಚಾರ ಕುರಿತು ನ್ಯಾಯಾಂಗ ಆಯೋಗ ರಚನೆಯಾಗಿ ಒಂದು ವರ್ಷ ಕಳೆದಿದೆ. ಪ್ರತಿಕಾರದ ಕ್ರಮ ಎಲ್ಲಿಂದ ಬಂತ್ತು ಎಂದು ಮರು ಪ್ರಶ್ನೆ ಮಾಡಿದರು. ಕೊವೀಡ್ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ಆಯೋಗದ ವರದಿ   ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS : ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸೇವೆ ಇನ್ನಷ್ಟು ಚುರುಕು: ಕಂದಾಯ ಇಲಾಖೆಯಿಂದ ಹೊಸ ನಿಯಮ ಜಾರಿ

2 Mins Read

BREAKING : ರಾಜ್ಯ ಸರ್ಕಾರದಿಂದ 29 ಮಂದಿ ‘PSI’ , 26 ‘ASI’ ಗಳ ವರ್ಗಾವಣೆ ಮಾಡಿ ಆದೇಶ |Transfer

3 Mins Read

BIG NEWS : ರಾಜ್ಯದಲ್ಲಿ ಜನಗಣತಿ ಮುಗಿಯುವವರೆಗೆ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್: ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ | Karnataka Government

2 Mins Read
Recent News

ಫಾಹಲ್ಗಾಮ್ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕರಾಳ ಹಸ್ತ: ‘ಗೋಪ್ರೋ’ ಕ್ಯಾಮೆರಾ ಮತ್ತು 2024 ರ ದಾಳಿಯ ಲಿಂಕ್ ಬಿಚ್ಚಿಟ್ಟ ಎನ್‌ಐಎ!

JOB ALERT : ರೈಲ್ವೇ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

BIG NEWS : ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸೇವೆ ಇನ್ನಷ್ಟು ಚುರುಕು: ಕಂದಾಯ ಇಲಾಖೆಯಿಂದ ಹೊಸ ನಿಯಮ ಜಾರಿ

BREAKING : ರಾಜ್ಯ ಸರ್ಕಾರದಿಂದ 29 ಮಂದಿ ‘PSI’ , 26 ‘ASI’ ಗಳ ವರ್ಗಾವಣೆ ಮಾಡಿ ಆದೇಶ |Transfer

State News
KARNATAKA

BIG NEWS : ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸೇವೆ ಇನ್ನಷ್ಟು ಚುರುಕು: ಕಂದಾಯ ಇಲಾಖೆಯಿಂದ ಹೊಸ ನಿಯಮ ಜಾರಿ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳ (AJSK) ಮೂಲಕ ನೀಡಲಾಗುವ ವಿವಿಧ ಸಾರ್ವಜನಿಕ…

BREAKING : ರಾಜ್ಯ ಸರ್ಕಾರದಿಂದ 29 ಮಂದಿ ‘PSI’ , 26 ‘ASI’ ಗಳ ವರ್ಗಾವಣೆ ಮಾಡಿ ಆದೇಶ |Transfer

BIG NEWS : ರಾಜ್ಯದಲ್ಲಿ ಜನಗಣತಿ ಮುಗಿಯುವವರೆಗೆ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್: ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ | Karnataka Government

GOOD NEWS : ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 5,910 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಆದೇಶ | Guest Lecturers Jobs

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.