Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೊರೊನ ಹಗರಣ : ಅಗತ್ಯವೆ ಇಲ್ಲದ ಯಂತ್ರೋಪಕರಣ ಖರೀದಿಯಲ್ಲಿ 15 ಕೋಟಿಗೂ ಅಧಿಕ ಅಕ್ರಮ : ನ್ಯಾ.ಕುನ್ಹಾ ವರದಿ
KARNATAKA

BREAKING : ಕೊರೊನ ಹಗರಣ : ಅಗತ್ಯವೆ ಇಲ್ಲದ ಯಂತ್ರೋಪಕರಣ ಖರೀದಿಯಲ್ಲಿ 15 ಕೋಟಿಗೂ ಅಧಿಕ ಅಕ್ರಮ : ನ್ಯಾ.ಕುನ್ಹಾ ವರದಿ

By kannadanewsnow0514/11/2024 8:57 AM

ಬೆಂಗಳೂರು : ಕೊರೋನಾ ಸಮಯದಲ್ಲಿ ಅಗತ್ಯವೇ ಇಲ್ಲದೆ ಇರುವ ಸಂದರ್ಭದಲ್ಲಿ ಸುಮಾರು 84.99 ಕೋಟಿ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಯಂತ್ರೋಪಕರಣಗಳನ್ನು ಖರೀದಿಸಿದ್ದು ಅದರಲ್ಲಿ 15.83 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ನ್ಯಾ.ಕುನ್ಹಾ ಆಯೋಗದ ವರದಿಯಲ್ಲಿನ ಸ್ಪೋಟಕ ಮಾಹಿತಿ ಲಭ್ಯವಾಗಿದೆ.

ಕೊರೋನಾ ವೈರಾಣು ಪತ್ತೆಗೆ ಯಾವ ರೀತಿಯಲ್ಲೂ ನೆರವಿಗೆ ಬರದ 17 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು, ಕೋವಿಡ್ ನಿರ್ವಹಣೆಗಾಗಿ ಬಿಡುಗಡೆ ಮಾಡಿದ ಅನುದಾನದಲ್ಲೇ ಖರೀದಿಸಲಾಗಿದೆ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಯಾವ ಪ್ರಯೋಜನವೂ ಆಗಿಲ್ಲ ಎಂದು ವರದಿ ಹೇಳಿದೆ.128 ಸ್ಟೈಸ್ ಸಾಮರ್ಥ್ಯದ ಸಿ.ಟಿ ಸ್ಕ್ಯಾನ್ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ ಪಿಲಿಪ್ಸ್ ಇಂಡಿಯಾ 128 ಸ್ಟೈಸ್ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ, ಫೋರ್ಸಸ್ ಹೆಲ್ತ್ಕೇರ್ 160 ಸ್ಟೈಸ್ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ ಬಿಡ್ ಸಲ್ಲಿಸಿದ್ದವು.

2020-2022ರ ನಡುವೆ ವಿವಿಧ ಜಿಲ್ಲಾಸ್ಪತ್ರೆಗಳಿಗೆಂದು 128 ಸ್ಟೈಸ್ ಸಾಮರ್ಥ್ಯದ 11 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು ಖರೀದಿಸಲಾಗಿದೆ. ಸೇವ್ ಮೆಡಿಟೆಕ್ ಸಿಸ್ಟಮ್ಸ್ ಎಂಬ ಕಂಪನಿಯು 2020ರ ಆಗಸ್ಟ್‌ನಲ್ಲಿ ಒಂದು ಯಂತ್ರವನ್ನು 4.92 ಕೋಟಿ ರೂಪಾಯಿ ದರದಲ್ಲಿ ಪೂರೈಕೆ ಮಾಡಿದೆ. ಇದೇ ಕಂಪನಿ 2021ರ ಜೂನ್‌ನಲ್ಲಿ ಎರಡು ಯಂತ್ರಗಳನ್ನು ಅದೇ ದರದಲ್ಲಿ ಪೂರೈಸಿದೆ ಎಂಬ ಮಾಹಿತಿ ವರದಿಯಲ್ಲಿದೆ.

2021ರ ಅಕ್ಟೋಬರ್‌ನ 10ರಂದು ಫೋರ್ಸಸ್‌ ಹೆಲ್ತ್‌ಕೇರ್‌ ಕಂಪನಿಯು 2 ಯಂತ್ರಗಳನ್ನು ತಲಾ 6.10 ಕೋಟಿ ರೂಪಾಯಿ ದರದಲ್ಲಿ ಪೂರೈಕೆಗೆ ಒಪ್ಪಿಕೊಂಡಿದೆ. ಮತ್ತು ಅದೇ ಅಕ್ಟೋಬ‌ರ್ 12ರಂದು ಇನ್ನೂ ಆರು ಯಂತ್ರಗಳನ್ನು ತಲಾ 5.95 ಕೋಟಿ ರೂಪಾಯಿ ದರದಲ್ಲಿ ಪೂರೈಸಲು ಸಹಿ ಮಾಡಿದೆ. 4.92 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಬೇಕು ಎಂಬ ನಿಬಂಧನೆ ಇದ್ದರೂ, ಹೆಚ್ಚಿನ ದರಕ್ಕೆ ಖರೀದಿಸಿದ ಕಾರಣಕ್ಕೆ 8.55 ರೂಪಾಯಿ ಕೋಟಿ ನಷ್ಟವಾಗಿದೆ ಎಂದು ವರದಿ ವಿವರಿಸಿದೆ.

ಜಿಇಎಂ ಪೋರ್ಟಲ್‌ನಲ್ಲಿ ಈ ಯಂತ್ರಕ್ಕೆ 4.92 ಕೋಟಿ ರೂಪಾಯಿ ಎಂದು ನಮೂದಾಗಿದೆ. ನಿಯಮಗಳ ಪ್ರಕಾರ ಸರ್ಕಾರಿ ಸಂಸ್ಥೆಗಳು ಈ ಯಂತ್ರಗಳನ್ನು ಅದೇ ದರದಲ್ಲಿ ಖರೀದಿಸಬೇಕು. ಸೇವ್ ಮೆಡಿಟೆಕ್‌ನಿಂದ ಮೂರು ಯಂತ್ರಗಳನ್ನು ಅದೇ ದರದಲ್ಲಿ ಖರೀದಿಸಿದ್ದರೂ, ಕೆಲವೇ ತಿಂಗಳ ಅಂತರದಲ್ಲಿ ಒಂದು ಕೋಟಿಗೂ ಹೆಚ್ಚು ದರ ನೀಡಿ ಏಳು ಯಂತ್ರಗಳನ್ನು ಖರೀದಿಸಲಾಗಿದೆ. ಇಲ್ಲಿ ಅಕ್ರಮ ನಡೆದಿದೆ ಎಂದು ವರದಿ ಹೇಳಿದೆ.

ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ಕಾರ್ಯವೈಖರಿಗೆ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.
ಕೊರೊನ ವೇಳೆ ಖಾಸಗಿ ಲ್ಯಾಬ್ ಗಳಿಗೆ 6.93 ಕೋಟಿ ಹಣ ಸಂದಾಯವಾಗಿದೆ. ಆದರೆ ಖಾಸಗಿ ಲ್ಯಾಬ್ ಗಳು ICMR ನಿಂದ ಮಾನ್ಯತೆ ಪಡೆದಿಲ್ಲ. ಅಧಿಕೃತ ICMR ಲ್ಯಾಬ್ ಗಳು ಅಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. RTPCR ಟೆಸ್ಟಿಗೆ ಲ್ಯಾಬ್ ಗಳ ಸಾಮರ್ಥ್ಯ ಕ್ಷಮತೆ ಗುರುತಿಸಿಲ್ಲ.

ಸಾಮರ್ಥ್ಯ ಹಾಗೂ ಕ್ಷಮತೆ ಪರಿಶೀಲಿಸದೆ ಖಾಸಗಿ ಲ್ಯಾಬ್ ಗೆ ಅನುಮತಿ ನೀಡಲಾಗಿದೆ. 6 ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನಧಿಕೃತವಾಗಿ ಲ್ಯಾಬ್ ಗಳಿಗೆ ಹಣ ಸಂದಾಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 8 ಲ್ಯಾಬ್ ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ರೂಪಾಯಿ ಸಂದಾಯವಾಗಿದೆ. ಮಾನ್ಯತೆ ಪಡೆದ ಲ್ಯಾಬ್ಗಳಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಲ್ಯಾಬ್ ಎಂದು ಗುರುತಿಸಿಲ್ಲ.

Share. Facebook Twitter LinkedIn WhatsApp Email

Related Posts

vidhana soudha

BREAKING : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ : 56 ಸಾವಿರ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ !

26/02/2026 8:52 PM1 Min Read

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

26/02/2026 7:29 PM4 Mins Read

BIG NEWS: ದ್ವಿತೀಯ PUC ಪ್ರಶ್ನೆ ಪತ್ರಿಕೆ ಮಾರಾಟ?: ಈ ಸ್ಪಷ್ಟನೆ ಕೊಟ್ಟ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ

26/02/2026 7:17 PM1 Min Read
Recent News

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM

ರೈಲ್ವೆಯಲ್ಲಿ ತಂತ್ರಜ್ಞಾನ ಕ್ರಾಂತಿ : ‘ರೈಲ್ ಟೆಕ್ ಪೋರ್ಟಲ್’ ಆರಂಭ, 52 ವಾರಗಳಲ್ಲಿ 52 ಪ್ರಮುಖ ಸುಧಾರಣೆಗಳಿಗೆ ಮಾಸ್ಟರ್ ಪ್ಲಾನ್

26/02/2026 9:23 PM
State News
vidhana soudha KARNATAKA

BREAKING : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ : 56 ಸಾವಿರ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ !

By kannadanewsnow5726/02/2026 8:52 PM KARNATAKA 1 Min Read

ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ದೀರ್ಘಕಾಲದ ಕಾಯುವಿಕೆಗೆ ತೆರೆ ಎಳೆದಿರುವ ರಾಜ್ಯ ಸಚಿವ…

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

26/02/2026 7:29 PM

BIG NEWS: ದ್ವಿತೀಯ PUC ಪ್ರಶ್ನೆ ಪತ್ರಿಕೆ ಮಾರಾಟ?: ಈ ಸ್ಪಷ್ಟನೆ ಕೊಟ್ಟ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ

26/02/2026 7:17 PM

ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್: ಮಂಡ್ಯ ಡಿಸಿ

26/02/2026 7:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.