ಬೆಂಗಳೂರು : ಕೋವಿಡ್ 19 ಅವಧಿಯಲ್ಲಿ ನಡೆದ ಅಕ್ರಮದ ವರದಿಯನ್ನು ಇಂದು ನಿವೃತ್ತ ನ್ಯಾ.ಜಾನ್ ಮೈಕಲ್ ಕುನ್ಹಾ ಅಯೋಗವು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು. ಕಾವೇರಿ ನಿವಾಸದಲ್ಲಿ ಕೋವಿಡ್ ಅಕ್ರಮದ ವರದಿಯನ್ನು ನಿವೃತ್ತ ನ್ಯಾ. ಜಾನ್ ಮೈಕಲ್ ಕುನ್ಹಾ ಆಯೋಗ ವರದಿ ಸಲ್ಲಿಸಿತು.
ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುಮಾರು 7 ಸಂಪುಟವುಳ್ಳ ವರದಿ ಸಲ್ಲಿಕೆ ಮಾಡಲಾಯಿತು. ಒಟ್ಟು 7 ವಾಲ್ಯೂಮ್ ನ 1,808 ಪುಟಗಳು ಇರುವ ವರದಿಯನ್ನು ಸಲ್ಲಿಕೆ ಮಾಡಿತು. ಆಯೋಗವು 1,808 ಪುಟಗಳಿರುವ ವರದಿಯನ್ನು ಸಲ್ಲಿಕೆ ಮಾಡಿತು.
ಕೊರೋನಾ ಸಂದರ್ಭದಲ್ಲಿ ನಡೆದ ಹಗರಣಗಳ ಕುರಿತಂತೆ ತನಿಖೆ ನಡೆಸಲು, 2023ರ ಅಗಸ್ಟ್ 25 ರಂದು ಆಯೋಗ ರಚಿಸಲಾಗಿತ್ತು. 2024 ಅಕ್ಟೋಬರ್ 31 ರಂದು ಮೊದಲ ಮಧ್ಯಂತರ ಅವಧಿ ಸಲ್ಲಿಕೆ ಮಾಡಲಾಗಿತ್ತು. 11 ಸಂಪುಟಗಳಲ್ಲಿದ್ದ ಮೊದಲ ತನಿಖೆಯ ವರದಿ ಸಲ್ಲಿಸಲಾಗಿತ್ತು. ಇದೀಗ ಎರಡನೇ ಮಧ್ಯಂತರ ವರದಿಯನ್ನು ಆಯೋಗ ಸಲ್ಲಿಸಿದೆ.