ಶಾಂಘೈ: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಕೋವಿಡ್ -19 ಅನ್ನು ತಡೆಯುವ ಪ್ರಯತ್ನಗಳನ್ನು ಸ್ಥಳೀಯ ಸರ್ಕಾರ ಹೆಚ್ಚಿಸಿದೆ, ಇತ್ತೀಚಿನ ದಿನಗಳಲ್ಲಿ ಕೋವಿಡ್ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ಚೀನಾ ಸರ್ಕಾರದ ನಿದ್ದೆಯನ್ನು ಕೆಡಿಸಿದೆ.
ಸೂಪರ್ಮಾರ್ಕೆಟ್ಗಳು ಮತ್ತು ಜಿಮ್ಗಳಂತಹ ಜನನಿಬಿಡ ಪ್ರದೇಶಗಳನ್ನು ಪ್ರವೇಶಿಸುವ ವ್ಯಕ್ತಿಗಳ ಮೇಲೆ ಕಠಿಣ ತಪಾಸಣೆ ಮತ್ತು ಸ್ಕ್ರೀನಿಂಗ್ ಮಾಡಬೇಕೆಂದು ಬೀಜಿಂಗ್ನ ಆರೋಗ್ಯ ಪ್ರಾಧಿಕಾರ ಪ್ರಕಟಣೆಯನ್ನು ಹೊರಡಿಸಿದೆ. ಇದಲ್ಲದೇ ಶಂಕಿತ ಪ್ರಕರಣಗಳಿರುವ ಹಲವಾರು ವಸತಿ ಸಮುಚ್ಚಯಗಳ ಮೇಲೆ ಮೂರು ದಿನಗಳ ಲಾಕ್ಡೌನ್ಗಳನ್ನು ಹೇರಲಾಯಿಗಿದ್ದು; ಹೊಸ ಕಾಯಿಲೆಗಳು ಕಾಣಿಸಿಕೊಂಡರೆ ಈ ಲಾಕ್ಡೌನ್ಗಳನ್ನು ಇನ್ನೂ ಹೆಚ್ಚು ದಿನಗಳ ಕಾಲ ಹೆಚ್ಚಿಸ ಬಹುದು ಅಂತ ತಿಳಿಸಿದೆ.