ಬೆಂಗಳೂರು : ದೇಶದಲ್ಲಿ ಕೊರೊನಾ ವೈರಸ್ ಮತ್ತೆ ಅಬ್ಬರಿಸುತ್ತಿದ್ದು ಇದೀಗ ರಾಜ್ಯದಲ್ಲೂ ಕೂಡ ದಿನದಿಂದ ದಿನಕ್ಕೆ ಕರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಜನರು ಯಾವುದೇ ರೀತಿಯಾದಂತಹ ಆತಂಕ ಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.
ರಾಜ್ಯದಲ್ಲಿ 328 ಜನರಿಗೆ ಕೊರೊನ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 163 ಜನರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.ರಾಜ್ಯದಲ್ಲಿ ಕೊರೊನ ಪಾಸಿಟಿವಿಟಿ ಶೇಕಡ 4.55 ಇದ್ದು, ರಾಜ್ಯದಲ್ಲಿ 159 ಜನರಲ್ಲಿ ಕರೋನಾ ಸೋಂಕು ಸಕ್ರಿಯವಾಗಿದೆ. ರಾಜ್ಯದಲ್ಲಿ ಒಂದೇ ದಿನ 7205 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮೈಸೂರು 26, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18, ತುಮಕೂರು 15,ಹಾಸನ 12, ಚಿಕ್ಕಬಳ್ಳಾಪುರದಲ್ಲಿ 10, ಬಳ್ಳಾರಿ 9, ದಕ್ಷಿಣ ಕನ್ನಡ 8, ಚಿಕ್ಕಮಂಗಳೂರು 7, ಮಂಡ್ಯ 7, ವಿಜಯನಗರ 7, ಶಿವಮೊಗ್ಗ 6, ಉತ್ತರಕನ್ನಡ ಜಿಲ್ಲೆಯಲ್ಲಿ 6, ಚಾಮರಾಜನಗರ ಐದು ಚಿತ್ರದುರ್ಗ 5 ಕಲಬುರ್ಗಿಯಲ್ಲಿ 4, ಬಾಗಲಕೋಟೆ 4, ರಾಯಚೂರು 4, ದಾವಣಗೆರೆಯಲ್ಲಿ 3, ರಾಮನಗರ 3, ಧಾರವಾಡ 2, ಗದಗಿನಲ್ಲಿ 1 ಸೇರಿದಂತೆ ಹಾವೇರಿ,ಕೋಲಾರ ಉಡುಪಿ ಜಿಲ್ಲೆಯಲ್ಲಿ ತಲಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.