ಬೆಂಗಳೂರು: ಬಿಜೆಪಿ ವಿರುದ್ಧ 40% ಕಮೀಷನ್ ಆರೋಪ ಮಾಡಿ, ವಿಧಾನಸಭಾ ಚುನಾವಣೆಯ ವೇಳೆಯಲ್ಲೇ ರೇಟ್ ಕಾರ್ಡ್ ಜಾಹೀರಾತು ಬಿಡುಗಡೆ ಮಾಡಿದ್ದರ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಮಾರ್ಚ್.28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಲಾಗಿದ್ದಂತ ಕರೆಷ್ಷನ್ ರೇಟ್ ಕಾರ್ಡ್ ಜಾಹೀರಾತಿನಿಂದಾಗಿ ಬಿಜೆಪಿ ಪಕ್ಷಕ್ಕೆ ಹಾನಿಯಾಗಿದೆ ಎಂಬುದಾಗಿ ಆರೋಪಿಸಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ಪಕ್ಷದಿಂದ ಖಾಸಗಿ ದೂರು ನೀಡಲಾಗಿತ್ತು.
ಇಂದು ಈ ದೂರಿನ ವಿಚಾರಣೆಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶ ಜೆ.ಪ್ರೀತ್ ನಡೆಸಿದರು. ನ್ಯಾಯಾಪೀಠದ ಮುಂದೆ ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ವಾದ ಮಂಡಿಸಿ, ಕಾಂಗ್ರೆಸ್ ಪಕ್ಷ ನೀಡಿದ್ದಂತ ಜಾಹೀರಾತಿನಿಂದಾಗಿ ಬಿಜೆಪಿ ಪಕ್ಷಕ್ಕೆ ಹಾನಿಯಾಗಿದೆ ಎಂಬುದಾಗಿ ಆರೋಪಿಸಿದರು.
ಈ ಆರೋಪದ ನಂತ್ರ ನ್ಯಾಯಪೀಠವು ಮಾರ್ಚ್.28ರಂದು ಕೋರ್ಟ್ ಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸಮನ್ಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ. ಈ ಮೂಲಕ 40% ಭ್ರಷ್ಟಾಚಾರದ ಆರೋಪ ಮಾಡಿ, ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದಂತ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್ ನೀಡಿದೆ.
BREAKING: ರಾಜ್ಯದಲ್ಲಿ ‘ಅಮಾನವೀಯ’ ಘಟನೆ: ಉತ್ತರ ಕನ್ನಡದಲ್ಲಿ ನಡುರಸ್ತೆಯಲ್ಲೇ ‘ಮಹಿಳೆ ಬಟ್ಟೆ’ ಹರಿದು ಹಲ್ಲೆ
BREAKING : ಪೇಟಿಎಂ ಗ್ರಾಹಕರಿಗೆ ಬಿಗ್ ರಿಲೀಫ್ : RBI ಮಹತ್ವದ ಕ್ರಮ, ‘UPI ಖಾತೆ ವರ್ಗಾವಣೆ’ ಸುಲಭ