ಸುರತ್ಕಲ್: ಕೌಟುಂಬಿಕ ಕಲಹದ ಕಾರಣದಿಂದಾಗಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದನು. ಈ ಪ್ರಕರಣದಲ್ಲಿ ಪಾಪಿ ತಂದೆಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ.
ಜೂನ್.22, 2022ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಕೋಡಿ ಬಳಿಯಲ್ಲಿ ತಂದೆ ವಿಜೇಶ್ ಶೆಟ್ಟಿಗಾರ್ ಹಾಗೂ ಪತ್ನಿ ನಡುವೆ ಜಗಳ ಉಂಟಾಗಿತ್ತು. ಕೌಟುಂಬಿಕ ಕಲಹ ತೀವ್ರಗೊಂಡ ಸಂದರ್ಭದಲ್ಲಿ ತನ್ನ ಮಕ್ಕಳಾದಂತ ರಶ್ಮಿತಾ (14), ಉದಯ್ (11) ಹಾಗೂ ದಕ್ಷಿತ್ (4) ಎಂಬುವರನ್ನು ಬಾವಿಗೆ ತಳ್ಳಿ ಕೊಂದಿದ್ದನು.
ಈ ಬಳಿಕ ಆರೋಪಿ ಪತ್ನಿಯನ್ನು ಎಳೆದುಕೊಂಡು ಹೋಗಿ ಆಕೆಯನ್ನು ಬಾವಿಗೆ ತಳ್ಳಿ, ತಾನು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೇ ಪತಿ, ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದರು. ಆದರೇ ಮೂವರು ಮಕ್ಕಳನ್ನು ಅದಾಗಲೇ ಸಾವನ್ನಪ್ಪಿದ ಕಾರಣ ಮೃತದೇಹವನ್ನು ಬಾವಿಯಿಂದ ಹೊರ ತೆಗೆಯಲಾಗಿತ್ತು.
ಈ ಘಟನೆ ಕುರಿತಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಿಯ ಕುರಿತಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. 32 ಸಾಕ್ಷಿದಾರರನ್ನು ವಿಚಾರಿಸಿದ ನಂತ್ರ, ಸಾಕ್ಷ್ಯ, ದಾಖಲೆ ಹಾಗೂ ಪೂರಕ ಸಾಕ್ಷ್ಯಗಳನ್ನು ವಾದ ಪ್ರತಿವಾದ ಆಲಿಸಿದಂತ ನ್ಯಾಯಮೂರ್ತಿ ಸಂಧ್ಯಾ ಎಸ್ ಅವರು, ಆರೋಪಿ ತಂದೆ ವಿಜೇಶ್ ಶೆಟ್ಟಿಗೆ ಭಾರತೀಯ ದಂಡ ಸಂಹಿತೆ ಕಲಂ 302 ರಡಿಯ ಅಪರದಕ್ಕೆ ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 307 ರಡಿಯ ಅಪರದಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ವರ್ಷದ ಕೊನೇ ದಿನವೂ ಬಿಬಿಎಂಪಿಯಿಂದ ಪಾದಚಾರಿ ಮಾರ್ಗ, ಫ್ಲೆಕ್ಸ್ ಬ್ಯಾನರ್ ಭರ್ಜರಿ ತೆರವು ಕಾರ್ಯಾಚರಣೆ
ಇಡೀ ಜಗತ್ತೇ 2024ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತವನ್ನು ಶ್ಲಾಘನೆ | PM Modi in 2024