ಧಾರವಾಡ : ಫ್ಲಾಟ್ ಖರೀದಿಗೆ ಅಗ್ರಿಮೆಂಟ್ ಮಾಡಿಕೊಂಡು, ಆ ಬಳಿಕ 7.55 ಲಕ್ಷ ಹಣ ಕಟ್ಟಿದ್ದರ ವ್ಯಕ್ತಿ ದಿಢೀರ್ ಸಾವನ್ನಪ್ಪಿದ್ದರು. ಬಾಕಿ ಹಣ ಕಟ್ಟಲಾಗದ ಕಾರಣ, ನಮಗೆ ಫ್ಲಾಟ್ ಖರೀದಿಸೋದಕ್ಕೆ ಆಗಲ್ಲ. ಕಟ್ಟಿದ ಹಣ ವಾಪಾಸ್ಸು ಕೊಡುವಂತೆ ಡೆಲವಲಪರ್ಸ್ ಗೆ ಮನವಿ ಮಾಡಿದರೂ ಕ್ಯಾರೆ ಎಂದಿರಲಿಲ್ಲ. ಇಂತಹ ಡೆವಲಪರ್ಸ್ ಗೆ ಕಟ್ಟಿದ ಹಣಕ್ಕೆ ಬಡ್ಡಿ ಸಹಿತ ವಾಪಾಸ್ ಪಾವತಿಸುವಂತೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ ಶಾಕ್ ನೀಡಿದೆ.
ಗೋವಾದ ನಿವಾಸಿಗಳಾದ ಮಮತಾ, ಹರ್ಷವರ್ಧನ ಹಾಗೂ ಸ್ನೇಹಾ ಒಂದೇ ಕುಟುಂಬದವರಿದ್ದು, ಇವರ ಗಂಡ, ತಂದೆಯವರಾದ ಗುಂಡಪ್ಪದೇಸಾಯಿ 2015 ರಲ್ಲಿ ಎದುರುದಾರರಾದ ಸಾಯಿ ಡವಲಪರ್ಸ್ ಇವರಿಂದ ಕಿರೇಸೂರನಲ್ಲಿ 3 ಪ್ಲಾಟಗಳನ್ನು ರೂ.9,90,000 ಕ್ಕೆ ಖರೀದಿಸಿದ್ದರು. ಅದರ ಪೈಕಿ ಕಂತುಗಳ ಮುಖಾಂತರ ಗುಂಡಪ್ಪ ದೇಸಾಯಿ ಎದುರುದಾರರಿಗೆ ರೂ.7,55,000 ಪಾವತಿಸಿದ್ದರು. ಅದರಂತೆ ಎದುರುದಾರರು ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು. 2018ರಲ್ಲಿ ಗುಂಡಪ್ಪ ದೇಸಾಯಿ ಮರಣ ಹೊಂದಿದ ಕಾರಣ ಅವರ ವಾರಸುದಾರರಾದ ಹೆಂಡತಿ ಮಮತಾ ಹಾಗೂ ಮಕ್ಕಳಾದ ಹರ್ಷವರ್ಧನ ಮತ್ತು ಸ್ನೇಹಾ ಎದುರುದಾರರಿಗೆ ಬಾಕಿ ಹಣ ಪಡೆದು ತಮಗೆ ಸೇಲ್‍ಡೀಡ್ ಮಾಡಿಕೊಡಲು ಎದುರುದಾರರಿಗೆ ಬಹಳಷ್ಟು ಸಲ ವಿನಂತಿಸಿದರೂ ಅವರು ಮಾಡಿಕೊಟ್ಟಿರುವುದಿಲ್ಲ. ಎದುರುದಾರ, ಬಿಲ್ಡರ್ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧಕ್ರಮ ಕೈಗೊಳ್ಳುವಂತೆ ದೂರುದಾರರು ದಿ:19/11/2024 ರಂದು ಧಾರವಾಡ ಜಿಲ್ಲಾ ಗಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ಒಪ್ಪಂದದಂತೆ ಎದುರುದಾರ, ಬಿಲ್ಡರ್‍ದೂರುದಾರರ ತಂದೆಯವರಿಂದ ಹಣ ಪಡೆದುಕರಾರು ಪತ್ರ ಮಾಡಿಕೊಟ್ಟಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ. ಅಲ್ಲದೇ ದೂರುದಾರರು ಸಾಕಷ್ಟು ಸಲ ಖರೀದಿ ಪತ್ರ ಮಾಡಿಕೊಡುವಂತೆ ಎದುರುದಾರರಿಗೆ ವಿನಂತಿಸಿದರೂ ಅವರು ಮಾಡಿಕೊಟ್ಟಿರುವುದಿಲ್ಲ. ಅಂತಹ ಅವರ ನಡವಾಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರು ಪಾವತಿಸಿದ ಹಣ ರೂ.7,55,000 ಮತ್ತು ಅದರ ಮೇಲೆ ಶೇ10% ದಿ:30/12/2015 ರಿಂದ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ತೊಂದರೆಗಾಗಿ ರೂ.50,000 ಪರಿಹಾರ ಹಾಗೂ ಈ ಪಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
15 ದಿನ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜನೆ: ಮೇ.12 ನೋಂದಣಿಗೆ ಲಾಸ್ಟ್ ಡೇಟ್
ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಮಂಡ್ಯದಲ್ಲಿ ಸುರಕ್ಷಿತ ಸಾಮಗ್ರಿ ವಿತರಣೆ