ಚಾಮರಾಜನಗರ: ರಾಜ್ಯದಲ್ಲಿ ಭಯವನ್ನೇ ಹುಟ್ಟಿಸಿದ್ದಂತ ವೀರಪ್ಪನ್ ಈಗ ಇಲ್ಲವಾಗಿದ್ದಾರೆ. ಆದರೇ ಈ ಗ್ಯಾಂಗಿನ ಸದಸ್ಯರಾಗಿದ್ದಂತ ಸ್ಟೆಲ್ಲಾ ಮೇರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.
2002ರಲ್ಲಿ ವೀರಪ್ಪನ್ ಗ್ಯಾಂಗಿನ ಸದಸ್ಯೆಯಾಗಿದ್ದಂತ ಸ್ಟೆಲ್ಲಾ ಮೇರಿಯ ವಿರುದ್ಧ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಟೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಲ್ಲಿ ಬಂಧಿಸಲಾಗಿತ್ತು. ಅಲ್ಲದೇ ಅವರು ಪಾಲಾರ್ ಬಾಂಬ್ ಸ್ಪೋಟದ ಆರೋಪಿ ಕೂಡ ಆಗಿದ್ದರು. ಅವರ ವಿರುದ್ಧ ರಾಮಾಪುರ ಪೊಲೀಸ್ ಠಾಣೆ ದಾಳಿಯ ಆರೋಪ ಕೂಡ ಇತ್ತು.
ಇಂದು ಚಾಮರಾಜನಗರದ ಬಾಲ ನ್ಯಾಯಮಂಡಳಿಯು ವೀರಪ್ಪನ್ ಗ್ಯಾಂಗ್ ಸದಸ್ಯೆ ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದಂತ ಪಾಲಾರ್ ಬಾಂಬ್ ಸ್ಪೋಟ ಸೇರಿದಂತೆ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದೆ. ಈ ಮೂಲಕ ಚಾಮರಾಜನಗರದ ಬಾಲ ನ್ಯಾಯ ಮಂಡಳಿಯು ವೀರಪ್ಪನ್ ಗ್ಯಾಂಗ್ ಸದಸ್ಯೆಯಾಗಿದ್ದ ಸ್ಟೆಲ್ಲಾ ಮೇರಿಗೆಕ್ಲೀನ್ ಚಿಟ್ ನೀಡಿ ಆದೇಶಿದೆ.
BREAKING: ರಾಮನಗರದಲ್ಲಿ ‘ನಟೋರಿಯಸ್ ರೌಡಿ ಶೀಟರ್’ ಕಾಲಿಗೆ ಪೊಲೀಸರಿಂದ ಗುಂಡೇಟು
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು