ಧಾರವಾಡ : ಧಾರವಾಡದ ಹಿರಿಯ ವಕೀಲರಾದ ಪ್ರೀತಮ್ ರೇಗೆ ಅವರು ಹಳೆ ಕಾರನ್ನು ಜೂನ್-2025 ರಲ್ಲಿ ಖರೀಧಿಸಿದ್ದರು. ಆ ವಾಹನದ ಆರ್.ಸಿ. ಮತ್ತು ವಿಮಾ ಪಾಲಸಿ ಹಳೆಯ ಮಾಲೀಕರ ಹೆಸರಿನಲ್ಲಿದ್ದವು. ಅದು ರಿಲೈಯನ್ಸ್ ಜನರಲ್ ವಿಮೆ ಯಾಗಿತ್ತು. ಆ ವಿಮೆ ಮಾರ್ಚ- 2026ರವರೆಗೆ ಚಾಲ್ತಿಯಿತ್ತು. ವಾಹನ ಖರೀಧಿಸಿದ ನಂತರ ಅದರ ಆರ್.ಸಿ. ಯನ್ನು ರೇಗೆಯವರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅದರ ಆಧಾರದ ಮೇಲೆ ಕಾರಿನ ವಿಮಾ ಪಾಲಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ ಕಲಂ 157 ಮೋಟಾರ ವಾಹನ ಕಾಯ್ದೆ ಅಡಿವಿಮಾ ಕಂಪನಿಗೆ ಅರ್ಜಿ ಹಾಕಿದ್ದರು.
ವರ್ಗಾವಣೆಗೆ ಅಗತ್ಯವಿರುವ ಶುಲ್ಕ ಕಟ್ಟಿ ಹಲವುಬಾರಿವಿನಂತಿಸಿದರೂ ವಿಮಾ ಕಂಪನಿಯವರು ಅರ್ಜಿದಾರರ ಹೆಸರಿಗೆ ಕಾರಿನ ವಿಮೆಯನ್ನು ವರ್ಗಾವಣೆಮಾಡಲಿಲ್ಲ. ಅವರು ಲೀಗಲ್ ನೋಟಿಸು ಕಳುಹಿಸಿದರೂ ರಿಲೈಯನ್ಸ್ ಜನರಲ್ ವಿಮಾ ಕಂಪನಿಯವರು ಅರ್ಜಿದಾರ ರೇಗೆಯವರ ಹೆಸರಿಗೆ ವರ್ಗಾವಣೆ ಮಾಡಲಿಲ್ಲ. ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಸದರಿ ವಿಮಾ ಕಂಪನಿಯವರ ವಿರುದ್ಧ ರೇಗೆ ವಕೀಲರು ದಿ03.10.2025 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ವಾಹನ ಖರೀದಿಸಿದ್ದಾರೆ. ಅವರ ಹೆಸರಿನಲ್ಲಿ ಆ ವಾಹನದ ನೋಂದಣಿ ವರ್ಗಾವಣೆಯಾಗಿದೆ. ಅಂತಹ ಸಂದರ್ಭದಲ್ಲಿ ಅಗತ್ಯ ಶುಲ್ಕ ನೀಡಿ ಅರ್ಜಿ ಸಲ್ಲಿಸಿದಾಗ ಕಲಂ 157 ಮೋ. ವಾ. ಕಾಯ್ದೆ ಅಡಿ ವಿಮಾಪಾಲಸಿ ವರ್ಗಾವಣೆ ಮಾಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಸ್ವತ: ವಕೀಲರೆ ವಿಮಾ ಕಂಪನಿಯವರ ಜೊತೆ ಅರ್ಜಿ ಕಳುಹಿಸಿ ವಿನಂತಿಸಿದರೂ ಮತ್ತು ಲೀಗಲ್ ನೋಟಿಸು ಕೊಟ್ಟರೂ ಎದುರುದಾರ ವಿಮಾ ಕಂಪನಿಯವರು ವಿಮಾಪಾಲಸಿ ವರ್ಗಾವಣೆಗೆ ಕ್ರಮ ಕೈಗೊಳ್ಳದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರು ದಾಖಲಿಸಿದ ನಂತರ ಆಯೋಗ ಚೀಮಾರಿ ಹಾಕಿದ ಮೇಲೆ ವಿಮಾ ಕಂಪನಿಯವರು ಪಾಲಸಿ ವರ್ಗಾವಣೆ ಮಾಡಿ ಕೊಟ್ಟರು. ಆದರೂ ದೂರು ದಾಖಲಿಸುವವರೆಗೆ ಪಾಲಸಿ ವರ್ಗಾವಣೆ ಮಾಡದ ಮತ್ತು ಅದರಿಂದ ಯಾವುದೇ ದುರ್ಘಟನೆ ನಡೆದರೆ ಆಗಬಹುದಾದ ಪರಿಣಾಮಗಳನ್ನು ಅವಲೋಕಿಸಿ ದೂರುದಾರರಿಗೆ ರೂ.25,000/- ಪರಿಹಾರ ಕೊಡುವಂತೆ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.5,000/- ಕೊಡುವಂತೆ ಆಯೋಗ ಎದುರುದಾರ/ರಿಲೈಯನ್ಸ್ ಜನರಲ್ ವಿಮಾ ಕಂಪನಿಗೆ ನಿರ್ದೇಶಿಸಿದೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜೊತೆಗೆ ಚರ್ಚೆ- HDK
SHOCKING: ಮನೆಯಲ್ಲೇ ನನ್ನನ್ನು ಯಾರೂ ಕೇಳಲ್ಲ, ನೀವ್ಯಾರು ಕೇಳೋಕೆ?: ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ








