ಧಾರವಾಡ: ಗ್ರಾಹಕನಿಗೆ ಮೋಸ ಮಾಡಿದಂತ ಬೆಂಗಳೂರಿನ ಲೈಫ್ ಸ್ಟೈಲ್ ಹಾಲಿಡೆಸ್ ಪ್ರೈ.ಲಿ ಗೆ ದಂಡ ವಿಧಿಸಿ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶಿಸಿದೆ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಅನಸುಯಮ್ಮ ವೃತ್ತಿಯಲ್ಲಿ ಖಾಸಗಿ ವ್ಯವಹಾರವನ್ನು ಮಾಡಿಕೊಂಡಿದ್ದಾರೆ. ಎದುರುದಾರರು ಪ್ರವಾಸ ಮತ್ತು ಹೊಟೇಲ ವಾಸ್ತವ್ಯದ ಸೇವೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಹೊಂದಿರುತ್ತಾರೆ. ಎದುರುದಾರರು ನೀಡಿದಂತಹ ಜಾಹಿರಾತುಗಳು ಮತ್ತು ಅವರು ಕೊಟ್ಟಂತಹ ಭರವಸೆಗಳನ್ನು ನಂಬಿ ದೂರುದಾರರು ಎದುರುದಾರರ ಕಂಪನಿಯಲ್ಲಿ ರೂ.1,35,000 ಗಳ ಪೈಕಿ ಶೇ.50 ಪಾವತಿಸಿ ಸದಸ್ಯತ್ವವನ್ನು ಪಡೆದಿದ್ದರು. ಮೇ-2024 ರಲ್ಲಿ ದೂರುದಾರರು ತಮ್ಮ 6 ಜನ ಕುಟುಂಬದ ಸದಸ್ಯರೊಂದಿಗೆ ಕೇರಳದ ಅಲ್ಲಾಪುಝಾ ಹೋಗುವ ನಿಮಿತ್ಯ ಎದುರುದಾರರಿಗೆ ಪೋನ್ ಮುಖಾಂತರಕರೆ ಮಾಡಿ ಹೊಟೇಲ್ ಬುಕ್ ಮಾಡಲು ಹೇಳಿದ್ದರು. ಅದರಂತೆ ಎದುರುದಾರರು ರೂ.20,000 ಪಾವತಿಸುವಂತೆ ದೂರುದಾರರಿಗೆ ಕೇಳಿ ಪಡೆದಿರುತ್ತಾರೆ.
ದೂರುದಾರರು ಕೇರಳದಲ್ಲಿ ಬೋಟ್ ಹೌಸ್ ಬುಕ್ ಮಾಡಲು ಎದುರುದಾರರಿಗೆ ಕೇಳಿಕೊಂಡಾಗ ಹೆಚ್ಚಿನ ಹಣ ರೂ.9,000 ಪಾವತಿಸುವಂತೆ ದೂರುದಾರರಿಗೆ ಕೇಳಿದಾಗ ದೂರುದಾರರು ಅದನ್ನು ಎದುರುದಾರರ ಏಜೆಂಟ್‍ಗೆ ಪಾವತಿಸಿರುತ್ತಾರೆ. ದೂರುದಾರರು ತಮ್ಮ ಕುಟುಂಬದೊಂದಿಗೆ ಬೋಟ್ ಹೌಸ್ ವಾಸ್ತವ್ಯಕ್ಕೆ ತೆರಳಿದಾಗ ಅಲ್ಲಿ ಬೋಟ್ ಹೌಸ್‍ಗೆ ಪಾವತಿ ಮಾಡಿದಂತಹ ಹಣ ಎದುರುದಾರರಿಗೆ ತಲುಪಿರದ ಕಾರಣ ಅವರು ಮತ್ತೆ ರೂ.9,000 ಪಾವಸಿಸುವಂತೆ ಕೇಳಿರುತ್ತಾರೆ. ಬೇರೆ ಹಾದಿ ಇಲ್ಲದೇ ದೂರುದಾರರು ಆ ಹಣವನ್ನು ಪಾವತಿಸಿ ಬೋಟ್ ಹೌಸ್‍ನಲ್ಲಿ ವಾಸ್ತವ್ಯವನ್ನು ಪಡೆದಿರುತ್ತಾರೆ. ನಂತರ ಅವರು ಎದುರುದಾರರ ಬಳಿ ಹಣ ಪಾವತಿಸಿದ ಬಗ್ಗೆ ವಿಚಾರಿಸಲು ಅವರು ಅದು ತಮಗೆ ತಲುಪದೇ ಇರುವುದನ್ನು ತಿಳಿಸಿರುತ್ತಾರೆ. ಇದರಿಂದ ಮನನೊಂದ ದೂರುದಾರರು ಪ್ರವಾಸದಿಂದ ಮರಳಿದ ನಂತರ ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಹಾಗೂ ತಾವು ಪಾವತಿಸಿದಂತಹ ರೂ.80,000 ನ್ನು ಮರಳಿಸುವಂತೆ ಎದುರುದಾರರಿಗೆ ಕೇಳಿರುತ್ತಾರೆ. ಎದುರುದಾರರು ಅದನ್ನು ಒಪ್ಪಿ ಮುಂದಿನ 45-120 ದಿನಗಳಲ್ಲಿ ಮರಳಿಸುವಂತೆ ಹೇಳಿ ಇವತ್ತಿನವರೆಗೂ ಮರಳಿಸಿರುವುದಿಲ್ಲ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:14/03/2025 ಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರ ಬಳಿ ರೂ.1,35,000 ಪೈಕಿ ರೂ.80,000 ಕೊಟ್ಟು ದೇಶ ಮತ್ತು ವಿದೇಶಗಳಲ್ಲಿ ಹೊಟೇಲ್‍ಗಳಲ್ಲಿ ವಾಸ್ತವ್ಯ ಪಡೆಯಲು ಸದಸ್ಯತ್ವವನ್ನು ಹೊಂದಿದ್ದರು. ಅಲ್ಲದೇ ಕೇರಳದ ಪ್ರವಾಸದಲ್ಲಿದ್ದಾಗ ದೂರುದಾರರು ಬೋಟ್ ಹೌಸಗೆ ರೂ.9,000 ಪಾವತಿಸಿ ಬುಕ್ ಮಾಡಲು ಕೇಳಿಕೊಂಡು ಹಣವನ್ನು ಪಾವತಿಸಿದಾಗ ಎದುರುದಾರರು ಬೋಟ್ ಹೌಸನ್ನು ಬುಕ್ ಮಾಡದೇ ಮತ್ತು ಹೆಚ್ಚಿನ ರೂ.9,000 ಹಣವನ್ನು ಅವರಿಂದ ಪಡೆದು ಸೇವಾ ನ್ಯೂನ್ಯತೆ ಎಸಗಿರುವುದು ಕಂಡು ಬಂದಿರುತ್ತದೆ. ಈ ವ್ಯವಸ್ತೆಯಿಂದ ತೊಂದರೆಯಾದ ದೂರುದಾರ ಪ್ರವಾಸದಿಂದ ಮರಳಿದ ನಂತರ ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಎದುರುದಾರರಿಗೆ ಕೇಳಿರುತ್ತಾರೆ. ಅದರಂತೆ ಎದುರುದಾರರು ಅದನ್ನು ಒಪ್ಪಿರುವುದು ದಾಖಲೆಗಳ ಮುಖಾಂತರ ಕಂಡು ಬಂದಿರುತ್ತೆ. ಆದರೂ ಇವತ್ತಿವರೆಗೆ ಸದಸ್ಯತ್ವದ ಹಣವನ್ನು ಮರಳಿ ಕೊಡದೇ ಸೇವಾ ನ್ಯೂನ್ಯತೆ ಎದಸಗಿರುವುದು ಆಯೋಗದ ಗಮನಕ್ಕೆ ಕಂಡು ಬಂದಿರುತ್ತದೆ. ದೂರುದಾರರು ಪಾವತಿಸಿದ ಹಣ ರೂ.80,000 ಗಳನ್ನು ಬಡ್ಡಿ ಲೆಕ್ಕ ಹಾಕಿ ಮತ್ತು ಅವರಿಗೆ ಆದಂತಹ ಮಾನಸೀಕ ತೊಂದರೆ ಹಾಗೂ ಅನಾನುಕೂಲಕ್ಕೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಈಗ ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ: ಹೀಗಿವೆ UIDAI ಹೊಸ ನಿಯಮಗಳು | Aadhaar Update