Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

22/03/2026 4:28 PM

PoK ಶಾಲೆಗಳಲ್ಲಿ ‘JeM, LeT’ಯಿಂದ ಪುಟ್ಟ ಮಕ್ಕಳಿಗೆ ‘ಜಿಹಾದಿ’ ಟ್ರೈನಿಂಗ್, 7-13 ವರ್ಷ ವಯಸ್ಸಿನ ಮಕ್ಕಳ ನೇಮಕ : ವರದಿ

22/03/2026 4:23 PM

BREAKING: ಛತ್ತೀಸ್ ಗಢದಲ್ಲಿ ಘೋರ ದುರಂತ: ರೋಪ್‌ವೇ ಕೇಬಲ್ ತುಂಡಾಗಿ ಓರ್ವ ಮಹಿಳೆ ಸಾವು, 17 ಮಂದಿಗೆ ಗಾಯ

22/03/2026 4:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋಸದಿಂದ ಕಡಿತಗೊಂಡ ಹಣದ ಬಗ್ಗೆ ಕ್ರಮ ವಹಿಸದ ‘ಬ್ಯಾಂಕ್‌’ಗೆ ಕೋರ್ಟ್ ದಂಡ
KARNATAKA

ಮೋಸದಿಂದ ಕಡಿತಗೊಂಡ ಹಣದ ಬಗ್ಗೆ ಕ್ರಮ ವಹಿಸದ ‘ಬ್ಯಾಂಕ್‌’ಗೆ ಕೋರ್ಟ್ ದಂಡ

By kannadanewsnow0903/12/2025 5:22 PM

ಶಿವಮೊಗ್ಗ: ಮೋಸದಿಂದ ಕಟಾವಣೆಯಾದ ಮೊತ್ತದ ಕುರಿತು ಸರಿಯಾದ ಕ್ರಮ ಕೈಗೊಳ್ಳದ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.

ದೂರುದಾರರಾದ ದೇವಾಪ್ರಸಾದ್, ಶಾಂತಿನಗರ, ಶಿವಮೊಗ್ಗ, ವ್ಯವಸ್ಥಾಪಕರು ಯೂನಿಯನ್ ಬ್ಯಾಂಕ್, ವಿನೋಬನಗರ ಶಾಖೆ, ಶಿವಮೊಗ್ಗ, ಯೂನಿಯನ್ ಬ್ಯಾಂಕ್, ರೀಜಿನಲ್ ಆಫೀಸ್, ಶಿವಮೊಗ್ಗ, ಇವರ ವಿರುದ್ಧ ದೂರನ್ನು ಸಲ್ಲಿಸಿ, 1ನೇ ಎದುರುದಾರರ ಬ್ಯಾಂಕಿನ ಹಲವು ವರ್ಷಗಳಿಂದ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ದಿ: 24/05/2024 ರಂದು ಸಂಜೆ ಸುಮಾರು 6.34 ಕ್ಕೆ ರೂ.1,85,500/- ಖಾತೆಯಿಂದ ಕಟಾವಾಗಿರುವುದಾಗಿ ದೂರುದಾರರ ಪೋನ್‌ಗೆ ಸಂದೇಶ ಬಂದಿರುತ್ತದೆ.

ಈ ವಿಷಯವನ್ನು ದೂರುದಾರರು 1ನೇ ಎದುರುದಾರ ಬ್ಯಾಂಕ್‌ಗೆ ವರದಿ ಮಾಡಿ, ಇದು ಅನಧಿಕೃತವಾದ/ಮೋಸದ ವ್ಯವಹಾರವಾಗಿರುತ್ತದೆ. ಆದ್ದರಿಂದ ಸದರಿ ಮೊತ್ತ ಪಾವತಿ ತಡೆ ಹಿಡಿಯಲು ತಿಳಿಸಿದ್ದು, 1ನೇ ಎದುರುದಾರರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ತದನಂತರ, ದೂರುದಾರರು ಸೈಬರ್ ಕ್ರೈಂ ಪೋಲಿಸ್ ಠಾಣೆ, ಶಿವಮೊಗ್ಗ, ಇವರಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ದೂರುದಾರರು 4ನೇ ಎದುರುದಾರರಿಗೆ ನೋಟೀಸ್ ನೀಡಿರುತ್ತಾರೆ. ನೋಟೀಸ್ ತಲುಪಿದ್ದು ಯಾವುದೇ ಕ್ರಮ/ಪ್ರತ್ಯುತ್ತರವನ್ನು ನೀಡದೇ ಅನಧಿಕೃತವಾಗಿ ಕಟಾವಣೆ ಆದ ಮೊತ್ತವನ್ನು ದೂರುದಾರರ ಖಾತೆಗೆ ಮರು ಜಮೆ ಮಾಡದೇ ಸೇವಾ ನ್ಯೂನತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.

ಆಯೋಗವು ನಿಯಮಾನುಸಾರ ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಸುತ್ತೋಲೆ ದಿ: 06/07/2017 ರಂತೆ, ಎದುರುದಾರರು ಅನಧಿಕೃತವಾಗಿ/ಮೋಸದಿಂದ ಕಟಾವಣೆಯಾದ ಮೊತ್ತದ ಕುರಿತು ಸರಿಯಾದ ಕ್ರಮವನ್ನು ಕೈಗೊಳ್ಳದಿರುವುದರಿಂದ, ಮರುಜಮೆ ಮಾಡದಿರುವುದರಿಂದ, ಸೇವಾನ್ಯೂನತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ. ದೂರನ್ನು ಪುರಸ್ಕರಿಸಿ, 1 ಮತ್ತು 2ನೇ ಎದುರುದಾರರು ದೂರುದಾರರಿಗೆ ರೂ.1,85,500/-ಗಳಿಗೆ ದಿನಾಂಕ:24/05/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9 ರಂತೆ ಬಡ್ಡಿಯನ್ನು ಸೇರಿಸಿ, 45 ದಿನಗಳ ಒಳಗೆ ಪಾವತಿಸಬೇಕು.

ತಪ್ಪಿದ್ದಲ್ಲಿ ವಾರ್ಷಿಕ ಶೇ.12ರ ಬಡ್ಡಿಯನ್ನು ಸೇರಿಸಿ, ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು, ಹಾಗೂ ರೂ.10,000/-ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ ದಿನದಿಂದ 45 ದಿನಗಳ ಒಳಗೆ ಪಾವತಿಸುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ನೀಡಬೇಕೆಂದು ಎಂದು ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ದಿನಾಂಕ: 29/11/2025 ರಂದು ಆದೇಶಿಸಿದೆ.

‘ಸಂಚಾರ್ ಸಾಥಿ ಆ್ಯಪ್’ ಹಾಕಿಕೊಳ್ಳೋದು ಕಡ್ಡಾಯ ಆದೇಶವನ್ನು ಹಿಂಪಡೆದ ‘ಕೇಂದ್ರ ಸರ್ಕಾರ’ | Sanchar Saathi App

BREAKING : ಬೆಂಗಳೂರಲ್ಲಿ ಸಿಸಿಬಿ ಪೋಲೀಸರ ಭರ್ಜರಿ ಕಾರ್ಯಾಚರಣೆ : 28 ಕೋಟಿ ಮೌಲ್ಯದ ಡ್ರಗ್ಸ್ ಸೀಜ್, ಇಬ್ಬರು ಅರೆಸ್ಟ್!

Share. Facebook Twitter LinkedIn WhatsApp Email

Related Posts

ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

22/03/2026 4:28 PM1 Min Read

ತ್ರಿವೇಂಡ್ರಮ್‌ನಲ್ಲಿ ಮಂಡ್ಯದ ಮಗಳ ಮಿಂಚಿನ ಓಟ: 7ನೇ ಇಂಡಿಯನ್ ಓಪನ್‌ನಲ್ಲಿ ವಿಜಯಕುಮಾರಿಗೆ ಬೆಳ್ಳಿ ಪದಕ

22/03/2026 4:18 PM2 Mins Read

SHOCKING: ಕೌಟುಂಬಿಕ ಕಲಹದಿಂದ ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದ ಪತ್ನಿ! ಗಂಡನ ಸ್ಥಿತಿ ಗಂಭೀರ

22/03/2026 4:00 PM1 Min Read
Recent News

ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

22/03/2026 4:28 PM

PoK ಶಾಲೆಗಳಲ್ಲಿ ‘JeM, LeT’ಯಿಂದ ಪುಟ್ಟ ಮಕ್ಕಳಿಗೆ ‘ಜಿಹಾದಿ’ ಟ್ರೈನಿಂಗ್, 7-13 ವರ್ಷ ವಯಸ್ಸಿನ ಮಕ್ಕಳ ನೇಮಕ : ವರದಿ

22/03/2026 4:23 PM

BREAKING: ಛತ್ತೀಸ್ ಗಢದಲ್ಲಿ ಘೋರ ದುರಂತ: ರೋಪ್‌ವೇ ಕೇಬಲ್ ತುಂಡಾಗಿ ಓರ್ವ ಮಹಿಳೆ ಸಾವು, 17 ಮಂದಿಗೆ ಗಾಯ

22/03/2026 4:20 PM

ತ್ರಿವೇಂಡ್ರಮ್‌ನಲ್ಲಿ ಮಂಡ್ಯದ ಮಗಳ ಮಿಂಚಿನ ಓಟ: 7ನೇ ಇಂಡಿಯನ್ ಓಪನ್‌ನಲ್ಲಿ ವಿಜಯಕುಮಾರಿಗೆ ಬೆಳ್ಳಿ ಪದಕ

22/03/2026 4:18 PM
State News
KARNATAKA

ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

By kannadanewsnow0922/03/2026 4:28 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ತ್ಯಾಗರ್ತಿ ವ್ಯಾಪ್ತಿಯ ಮಳ್ಳಕೊಪ್ಪ ಗ್ರಾಮದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಕಾಮಗಾರಿಯ ಸರ್ವೇ…

ತ್ರಿವೇಂಡ್ರಮ್‌ನಲ್ಲಿ ಮಂಡ್ಯದ ಮಗಳ ಮಿಂಚಿನ ಓಟ: 7ನೇ ಇಂಡಿಯನ್ ಓಪನ್‌ನಲ್ಲಿ ವಿಜಯಕುಮಾರಿಗೆ ಬೆಳ್ಳಿ ಪದಕ

22/03/2026 4:18 PM

SHOCKING: ಕೌಟುಂಬಿಕ ಕಲಹದಿಂದ ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದ ಪತ್ನಿ! ಗಂಡನ ಸ್ಥಿತಿ ಗಂಭೀರ

22/03/2026 4:00 PM

ಶೀಘ್ರದಲ್ಲೇ ‘ಲಕ್ಕಿ ಡ್ರಾ ಬಹುಮಾನ’ ಘೋಷಣೆ ದಿನಾಂಕ ಪ್ರಕಟ: ‘ರಿಪ್ಪನ್ ಪೇಟೆ ಕಲಾಕೌಸ್ತುಭ ಕನ್ನಡ ಸಂಘ’ ಸ್ಪಷ್ಟನೆ

22/03/2026 3:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.