ಬೆಂಗಳೂರು : ಬಿಬಿಎಂಪಿ ಜಾಹಿರಾತು ಶುಲ್ಕ ಪಾವತಿಸಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ವಿರುದ್ಧ ಬಿಜೆಪಿಯ ಎನ್.ಆರ್ ರಮೇಶ ಅವರು ಖಾಸಗಿ ದೂರು ಸಲ್ಲಿಸಿದ್ದರು. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಬಳಿಕ ಸಂತೋಷ್ ಗಜಾನನ ಭಟ್ ವಿಚಾರಣೆ ಬಳಿಕ ಖಾಸಗಿ ದೂರು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಹೌದು ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಖಾಸಗಿ ದೂರು ವಜಾಗೊಂಡಿದ್ದು, ಈ ಕುರಿತು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯ ಎನ್ ಆರ್ ರಮೇಶ್ ಕುರಿತು ಖಾಸಗಿ ದೂರು ದಾಖಲಿಸಿದ್ದರು. 2013-2018ರ ಅವಧಿಯಲ್ಲಿ ಬಿಬಿಎಂಪಿಗೆ ಜಾಹೀರಾತು ಶುಲ್ಕ ಪಾವತಿಸಿದ ಆರೋಪದ ಹಿನ್ನೆಲೆ ದೂರು ದಾಖಲಿಸಿದ್ದರು. ಅಲ್ಲದೇ ಲೋಕಾಯುಕ್ತ ಕೂಡ ಪ್ರಕರಣ ಮುಕ್ತಾಯಗೊಳಿಸಿತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಕೂಡ ಈ ಒಂದು ಖಾಸಗಿ ದೂರು ವಜಾ ಗೊಳಿಸಿದೆ