ನವದೆಹಲಿ: ಇತ್ತೀಚೆಗೆ ಮದುವೆ ಫಿಕ್ ಆಯ್ತು ಅಂದರೆ ಸಾಕು ಎಲ್ಲ ಪ್ರೀ ವೆಡ್ಡಿಂಗ್ ಶೂಟ್ ಮಾಡಲು ಮುಂದಾಗುತ್ತಾರೆ.
ಅದಕ್ಕಾಗಿ ನಾನಾ ರೀತಿ ಸ್ಥಳಗಳನ್ನು ಹುಡುಕುತ್ತಾರೆ. ಅಲ್ಲಿ ಜೋಡಿಗಳು ವಿಭಿನ್ನವಾಗಿ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಬೈಕ್ ಸ್ಟಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.
ಜೋಡಿಗಳಿಬ್ಬರು ಮದುವೆಗೆ ಧರಿಸಿರುವ ಬಟ್ಟೆಯನ್ನು ಧರಿಸಿ ಬೈಕ್ವೊಂದರಲ್ಲಿ ಕುಳಿತಿದ್ದಾರೆ. ಅದಾದ ಬಳಿಕ ಗಾಳಿಯಲ್ಲಿ ಬೈಕ್ ಹಾರಿಸಿದ್ದಾರೆ. ಅದು ಕಾರಿನ ಮೇಲೆ ಹಾರಿದೆ. ಅಷ್ಟೇ ಅಲ್ಲದೇ ಕೆಲವು ಸ್ಟಂಟ್ಗಳನ್ನು ಮಾಡಿದ್ದಾರೆ. ಈ ರೀತಿ ಸ್ಟಂಟ್ ಮಾಡಲು ಕ್ರೇನ್ನ ಸಹಾಯ ಪಡೆದಿದ್ದಾರೆ.ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ವೀಡಿಯೋಕ್ಕೆ ನೆಟ್ಟಿಗರು ಬಿನ್ನ ಬಿನ್ನ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.
pre-wedding shoots – i’m getting this pic.twitter.com/Ynwf7Kxr6a
— Best of the Best (@bestofallll) October 27, 2022