ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಜೂನ್.1ರಿಂದ 4ರವರೆಗೆ ಹಾಗೂ ಜೂನ್.6ರಂದು ಮದ್ಯ ಮಾರಾಟವನ್ನು ನಿಷೇಧ ಮಾಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.
ಇಂದು ಆದೇಶ ಹೊರಡಿಸಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024 ಘೋಷಣೆಯಾಗಿದೆ. ಈ ಚುನಾವಣೆಯು ಮುಕ್ತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು ಕ್ರಮವಹಿಸಲಾಗಿದೆ ಎಂದಿದ್ದಾರೆ.
ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಮತ್ತು ಮತ ಏಣಿಕೆಯ ದಿನದಂದು ಶುಷ್ಕ ದಿನ ಎಂದು ಘೋಷಿಸುವಂತೆ ಚುನಾವಣಾಧಿಕಾರಿಗಳು ಕೋರಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ದಿನಾಂಕ 01-06-2024ರ ಸಂಜೆ 4 ಗಂಟೆಯಿಂದ ದಿನಾಂಕ 03-06-2024ರ ಸಂಜೆ 4 ಗಂಟೆಯವರೆಗೆ ಹಾಗೂ ಮತ ಏಣಿಕೆಯ ದಿನಾಂಕ 06-06-2024ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಗಟು ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮದ್ಯ, ನಿಷೆಯುಳ್ಳ ಪದಾರ್ಥಗಳು, ಇತರೆ ಯಾವುದೇ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧದ ಜೊತೆಗೆ liquor shops, wine shops, bars, hotels, restaurants, tavern, shops or any other or private place ಗಳನ್ನು ಮುಚ್ಚುವಂತೆ ಮದ್ಯ ಮಾರಾಟ ಮಾಡದಿರವು ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಬರ ಪರಿಹಾರವಾಗಿ ನಯಾಪೈಸೆಯನ್ನೂ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಲ್ಲ: ಆರ್.ಅಶೋಕ್
‘ಆಧಾರ್ ಕಾರ್ಡ್’ ನವೀಕರಿಸಲು ಈ ದಿನವೇ ಲಾಸ್ಟ್ ಡೇಟ್ : ಈ ಸರಳ ರೀತಿಯಲ್ಲಿ ‘ಅಪ್ ಡೇಟ್’ ಮಾಡಿಸಿಕೊಳ್ಳಿ