ಚಾಮನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿ ಕೋವಿಡ್ ಸೆಂಟರ್ ನಲ್ಲಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ಹಣ ದುರುಪಯೋಗ ಪಡೆಸಿಕೊಂಡಿರುವ ಆರೋಪ ಕೇಳಿಬಂದಿದೆ. ಜಾರಿಗೆಯಾದ 2.35 ಕೋಟಿ ಅನುದಾನದಲ್ಲಿ 33.67 ಲಕ್ಷ ದುರುಪಯೋಗ ಮಾಡಿಕೊಳ್ಳಲಾಗಿದೆ.
JOB ALERT : ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ |Bangalore University
ಇದೀಗ ಎಸಿ ನೇತೃತ್ವದ ತಂಡ ತನಿಖೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿ ಅಕ್ರಮ ಬಯಲಾಗಿದೆ. ವರದಿ ಸಲ್ಲಿಸಿ ಐದು ತಿಂಗಳಾದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ.
ಕಳೆದ ಬಾರಿ ಕೊರೊನಾದಿಂದ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿತ್ತು.ಈ ವೇಳೆ ಸೆಂಟರ್ ನಲ್ಲಿ ವಸ್ತುಗಳನ್ನು ಖರೀದಿಸಲು ಮತ್ತು ಆಹಾರ ಸರಬರಾಜಿಗೆ ಜಿಲ್ಲಾಧಿಕಾರಿ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ನಕಲಿ ಬಿಲ್ಗಳನ್ನ ಸೃಷ್ಟಿಸಿ ಭ್ರಷ್ಟಾಚಾರ ಮಾಡಲಾಗಿದೆ.ದಿನಸಿ, ಸ್ಯಾನಿಟೈಸರ್, ಸೋಪ್, ಟೂತ್ ಪೇಸ್ಟ್, ಟೂತ್ ಬ್ರಶ್, ಕಸದ ಪೊರಕೆ, ಬಕೆಟ್, ಜಗ್ಗು, ಡಸ್ಟ್ಬಿನ್, ಟಿವಿ, ವಾಟರ್ ಹೀಟರ್, ವಾಟರ್ ಡಿಸ್ಪೆನ್ಸರ್, ಡಿಶ್ಗಳ ಖರೀದಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಮಾಡಲಾಗಿದೆ.