ಶಾಂಘೈ: ಕರೋನಾ ಸೋಂಕು ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. ಕರೋನಾ ಪ್ರಕರಣಗಳು ಚೀನಾದ ದೊಡ್ಡ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವೇಗವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ಕರೋನಾ ಸ್ಫೋಟದ ಸಾಧ್ಯತೆಯಿದೆ ಎನ್ನಲಾಗಿದೆ. ಇಲ್ಲಿನ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುವ ಪ್ರಕಾರ ಚೀನಾದ 60 ಪ್ರತಿಶತದಷ್ಟು ಜನರು ಚೀನಾದಲ್ಲಿ ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ. ತಜ್ಞ ಎರಿಕ್ ಫೀಗ್ಲೆ-ಡಿಂಗ್ ಅವರ ಪ್ರಕಾರ ತ್ವರಿತ ಸೋಂಕಿನಿಂದ ಲಕ್ಷಾಂತರ ಜನರು ಸಾಯಬಹುದು ಅಂಥ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಚೀನಾದ ಆಸ್ಪತ್ರೆಗಳು ಭರ್ತಿಯಾಗಿವೆ ಎಂದು ವರದಿ ಮಾಡಿದ್ದಾರೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮುಂದಿನ 90 ದಿನಗಳಲ್ಲಿ ಚೀನಾದ ಶೇಕಡಾ 60 ಕ್ಕೂ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಸೋಂಕಿನ ತ್ವರಿತ ಹೆಚ್ಚಳದ ನಂತರ ಲಕ್ಷಾಂತರ ಜನರು ಸಾಯುವ ಸಾಧ್ಯತೆಯಿದೆಯಂತೆ. ಇತ್ತೀಚಿನ ದಿನಗಳಲ್ಲಿ ಬೀಜಿಂಗ್ ನ ಚಿತಾಗಾರಗಳಲ್ಲಿ ಶವಗಳಿಂದ ತುಂಬಿಹೋಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.