ನವದೆಹಲಿ : ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 16,135 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 16,135 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 24 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5,25,223 ಕ್ಕೆ ಏರಿಕೆಯಾಗಿದೆ.
#COVID19 | ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 16,135 ಹೊಸ ಪ್ರಕರಣಗಳು, 13,958 ಚೇತರಿಕೆಗಳು ಮತ್ತು 24 ಸಾವುಗಳು ವರದಿಯಾಗಿವೆ.
ಸಕ್ರಿಯ ಪ್ರಕರಣಗಳು 1,13,864
ದೈನಂದಿನ ಪಾಸಿಟಿವಿಟಿ ದರ 4.85%
#COVID19 | India reports 16,135 fresh cases, 13,958 recoveries and 24 deaths, in the last 24 hours.
Active cases 1,13,864
Daily positivity rate 4.85% pic.twitter.com/TgcnBrAd7Z— ANI (@ANI) July 4, 2022