ಬೆಂಗಳೂರು: ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ಯುದ್ಧ ಸಾರಿದ ಬೆನ್ನಲ್ಲೇ, ಅದರ ಬಿಸಿ ಸಿಲಿಕಾನ್ ಸಿಟಿಯ ಗ್ರಾಹಕರಿಗೆ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರು ಹಾಗೂ ಆಮದು ವ್ಯತ್ಯಯದಿಂದಾಗಿ ಕಳೆದ ಕೇವಲ ಒಂದು ವಾರದಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದೆ.
ವಾರದಲ್ಲೇ ₹8 ಏರಿಕೆ!
ಕಳೆದ ಐದಾರು ದಿನಗಳಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯ ಮೇಲೆ ಅಂದಾಜು 8 ರೂಪಾಯಿಗಳಷ್ಟು ಏರಿಕೆಯಾಗಿದೆ. ಸದ್ಯ ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಲೀಟರ್ ಅಡುಗೆ ಎಣ್ಣೆಯ ಬೆಲೆ 168 ರೂಪಾಯಿಗಳಿಗೆ ತಲುಪಿದೆ. ಯುದ್ಧದ ತೀವ್ರತೆ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಈ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ವರ್ತಕರ ಆತಂಕ:
ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಪೂರೈಕೆ ಸರಪಳಿ (Supply Chain) ಕಡಿತಗೊಂಡಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಎಣ್ಣೆ ಪೂರೈಕೆಯಾಗುತ್ತಿಲ್ಲ ಎಂದು ವರ್ತಕರು ಅಳಲು ತೋಡಿಕೊಂಡಿದ್ದಾರೆ. ಸ್ಟಾಕ್ ಕಡಿಮೆಯಾಗುತ್ತಿರುವುದರಿಂದ ಮತ್ತು ಹೊಸದಾಗಿ ಅಮದು ಮಾಡಿಕೊಳ್ಳಲು ತೊಂದರೆಯಾಗುತ್ತಿರುವುದರಿಂದ ಬೆಲೆ ನಿಯಂತ್ರಣ ತಪ್ಪುತ್ತಿದೆ.
ಅಡುಗೆ ಎಣ್ಣೆಯ ಜೊತೆಗೆ ಇತರೆ ಆಮದು ಮಾಡಿಕೊಳ್ಳುವ ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.
ಇರಾನ್-ಇಸ್ರೇಲ್ ಯುದ್ಧದ ಬಿಸಿ: ಹಾವೇರಿಯಲ್ಲಿ ಡ್ರೈ ಫ್ರೂಟ್ಸ್, ಹಣ್ಣುಗಳ ಬೆಲೆ ದಿಢೀರ್ ಏರಿಕೆ!
BREAKING : ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ








