ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂಥೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಹೇಳಿಕೆ ಪರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬ್ಯಾಟ್ ಬೀಸಿದ್ದಾರೆ.
ಅವರು ಇಂದು ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ, ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಅಂಥ ಕಿಡಿಕಾರಿದರು. ಇನ್ನೂ ಜನರನ್ನು ಪ್ರಚೋದನೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಅಂತ ಹೇಳಿದರು. ಉಗ್ರರ ಚುಟುವಟಿಕೆಗಳನ್ನು ಹೆಚ್ಚುತ್ತಿದ್ದು, ನಿಮ್ಮದೇ ಸರ್ಕಾರವನ್ನು ಅಧಿಕಾರದಲ್ಲಿ ಇದ್ದು, ಅದನ್ನು ಹತ್ತಿಕ್ಕಿ ಅಂಥ ಆಗ್ರಹ ಮಾಡಿದರು.
ಬಿಜೆಪಿ ಅವರಿಗೆ ಬೇಕಾಗಿರುವುದು ಇಂತಹದ್ದೇ ಬೇಕಾಗಿರುವುದು, ಕೆಪಿಸಿಸಿ ಅಧ್ಯಕ್ಷ ಭಯೋತ್ಪದನೆಯನ್ನು ಸರ್ಮರ್ಥನೆ ಮಾಡಿ ಹೇಳಿಕೆ ನೀಡಿಲ್ಲ, ಅಂತ ಹೇಳಿದರು.