ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು ಅಧಿಸೂಚಿಸಲಾದ 2019 ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರು 1323 (1122+201) ಹುದ್ದೆಗಳ ಉಳಿಕೆ ಮೂಲ ವೃಂದದ ಮತ್ತು ಹೈ.ಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಮೂಲ ದಾಖೆಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆಗಳುಳ್ಳ ಅರ್ಹತಾ ಪಟ್ಟಿಯನ್ನು ಆಗಸ್ಟ್ 26, 2022 ರಂದು ಪ್ರಕಟಿಸಲಾಗಿದೆ.
ಅರ್ಹ ಅಭ್ಯರ್ಥಿಗಳಿಗೆ ಆಯೋಗದ ಕೇಂದ್ರ ಕಚೇರಿ ಬೆಂಗಳೂರು ಹಾಗೂ ಪ್ರಾಂತೀಯ ವಿಭಾಗಗಳಾದ ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ಶಿವಮೊಗ್ಗಗಳಲ್ಲಿ ಸೆಪ್ಟೆಂಬರ್ 19, 2022 ರಿಂದ ಅಕ್ಟೋಬರ್ 01 ರವರೆಗೆ (ದಿನಾಂಕ: 24-09-2022 ಮತ್ತು 25-09-2022ರ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ಮೂಲ ದಾಖಲೆಗಳ ಪರಿಶೀಲನೆ ನಡೆಸಲು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ರವಾನಿಸಲಾಗಿದೆ. ಮೂಲ ದಾಖಲೆ ಪರಿಶೀಲನೆಯ ದಿನಾಂಕ, ಸಮಯ ಮತ್ತು ವಿಳಾಸವನ್ನು ಒಳಗೊಂಡಂತೆ ವಿಭಾಗವಾರು ಅರ್ಹತಾ ಪಟ್ಟಿಯನ್ನು ಆಯೋಗದ ಅಂತರ್ಜಾಲhttp://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.